ಬಿಗ್ ಬಾಸ್ ಕನ್ನಡ ಸೀಸನ್ 11ನೇ ಮೊದಲ ವಾರ ಯಮುನಾ ಶ್ರೀನಿಧಿ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದರು. ಎರಡನೇ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ. ಈ ವಾರ ಜಗದೀಶ್ ಮತ್ತು ರಂಜಿತ್ಗೆ ಬಿಗ್ ಬಾಸ್ ಗೇಟ್‌ಪಾಸ್ ನೀಡಿದೆ.
ಹೌದು, ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಲಾಯರ್ ಜಗದೀಶ್ ಮನೆ ನಿಯಮಗಳನ್ನು ಮುರಿಯುತ್ತಾ ಸ್ಪರ್ಧಿಗಳ ಮೇಲೆ ಜಗಳವಾಡುತ್ತಾ ಸುದ್ದಿಯಲ್ಲಿದ್ದರು. ಆದರೆ ನಿನ್ನೆ ಬಿಗ್‌ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್‌ಬಾಸ್ ನಟ ರಂಜಿತ್ ಹಾಗೂ ಲಾಯರ್ ಜಗದೀಶ್ ಅವರನ್ನು ಬಿಗ್‌ಬಾಸ್ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಬಳಿಕ ಲಾಯರ್ ಜಗದೀಶ್ ಅವರು ಬೇಸರ ಹೊರ ಹಾಕಿದ್ದರು.
ಇದೀಗ ಬಿಗ್‌ಬಾಸ್ ಶೋಯಿಂದ ಹೊರ ಬಂದ ಬೆನ್ನಲ್ಲೇ ಜಗದೀಶ್ ಅವರು ಫೇಸ್ಬುಕ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು ಮೂರು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿದ್ದ ಲಾಯರ್ ಜಗದೀಶ್ ಸದ್ಯ ಸಖತ್ ಕೂಲ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ : ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಚಿತ್ರದ ಟ್ರೇಲರ್ ರಿಲೀಸ್..!