‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ 10 ವಾರಗಳು ಉರುಳಿವೆ. 11ನೇ ವಾರ ಚಾಲ್ತಿಯಲ್ಲಿದೆ. ಈವರೆಗೂ ಇಷ್ಟು ವಾರಗಳ ಕಾಲ ಉಗ್ರಂ ಮಂಜು – ಗೌತಮಿ ಜಾಧವ್ ಮಧ್ಯೆ ಆತ್ಮೀಯತೆ, ಗೆಳೆತನ ಇತ್ತು. ಆದರೆ, ಅದ್ಯಾವಾಗ ಗೌತಮಿ ಜಾಧವ್ ಕ್ಯಾಪ್ಟನ್ ಆದ್ರೋ ಮಂಜು – ಗೌತಮಿ ಗೆಳೆತನದಲ್ಲಿ ಬಿರುಕು ಮೂಡಿದೆ.
ಹೌದು, ಎರಡು ತಂಡವಾಗಿ ವಿಂಗಡನೆಯಾದ ಸ್ಪರ್ಧಿಗಳಿಗೆ ಬಿಗ್ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಇದೀಗ ರಿಲೀಸ್ ಆದ ಪ್ರೋಮೋದಲ್ಲಿ, ಸ್ಪರ್ಧಿಗಳಿಗೆ ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗ ಬಂದು ಬೀಳಬೇಕಾಗಿತ್ತು.
ಇದೇ ಟಾಸ್ಕ್ನಲ್ಲಿ ಗೌತಮಿ, ಐಶ್ವರ್ಯಾ ಆಡುತ್ತಿದ್ದರು. ಆಗ ಉಗ್ರಂ ಮಂಜು ಅವರ ಏಕಾಗ್ರತೆಯನ್ನು ಹಾಳು ಮಾಡಲು ಹಾಡು ಹಾಡಿದ್ದಾರೆ. ಆಗ ಶಿಶಿರ್ ಮಂಜಣ್ಣ ಸ್ಪಲ್ಪ ಸುಮ್ನೆ ಇರಿ ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಂಜು ಕಿರುಚಾಡಿದ್ದಾರೆ.
ಆಗ ಗೌತಮಿ ಗೆಳೆಯ ಮಂಜು ವಿರುದ್ಧ ಗುಡುಗಿದ್ದಾರೆ. ಆಡ್ತೀನೋ, ಸಾಯ್ತಿನೋ ದಯವಿಟ್ಟು ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳಷ್ಟು ತೊಂದರೆಯಾಗಿದೆ ಅಂತ ಹೇಳಿದ್ದಾರೆ. ಇದಾದ ಬಳಿಕ ಮತ್ತೆ ಬೆಡ್ರೂಮ್ನಲ್ಲಿ ಗಲಾಟೆ ಮಾಡಿಕೊಂಡು ಮಂಜು ಅವರ ಮೇಲೆ ಗೌತಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಅಂತಿಮ ಹಂತದ ಚಿತ್ರೀಕರಣದಲ್ಲಿ ಗುರುನಂದನ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರ..!