ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 12ನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯಲ್ಲಿ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ತಮ್ಮನ್ನು ತಾವು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಕಷ್ಟಪಡುತ್ತಿದ್ದಾರೆ.
ಹೌದು ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋವನ್ನು ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ, ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಾಗಿಸಿದನ್ನು ನೋಡಬಹುದು. ಒಂದು ತಂಡಕ್ಕೆ ಕರ್ನಾಟಕ ಖದರ್ ಮತ್ತೊಂದು ತಂಡಕ್ಕೆ ಕರುನಾಡ ಕಿಲಾಡಿಗಳು ಎಂದು ಹೇಸರಿಡಲಾಗಿದೆ.
ಈ ಚೆಂಡಿನ ಆಟದಲ್ಲಿ ಗೆಲ್ಲುವ ತಂಡದ ನಿಗದಿತ ಸದಸ್ಯರು ನಾಮಿನೇಷನ್ ಮಾಡುವ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಎಂದು ಬಿಗ್ಬಾಸ್ ಸೂಚಿಸಿದ್ದಾರೆ. ಅದರಂತೆ ಎರಡು ತಂಡದ ಸದಸ್ಯರು ಗೆಲ್ಲುವ ಭರದಲ್ಲಿ ಅಗ್ರೆಷನ್ನಿಂದ ಆಟವಾಡಿದ್ದಾರೆ.
ಇನ್ನು ಟಾಸ್ಕ್ ಆಡುವಾಗ ಐಶ್ವರ್ಯಾ ಸಿಂಧೋಗಿ ಹಾಗೂ ಭ್ಯವ್ಯಾ ಗೌಡ ಅವರು ಜಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದನ್ನು ನೋಡಬಹುದು.
ಇದನ್ನೂ ಓದಿ : ‘UI’ ಟೈಟಲ್ ಹಿಂದಿನ ರಹಸ್ಯ ಬಿಚ್ಟಿಟ್ಟ ರಿಯಲ್ ಸ್ಟಾರ್ ಉಪೇಂದ್ರ..!