Download Our App

Follow us

Home » ಸಿನಿಮಾ » ಬಿಗ್​ಬಾಸ್ ಮನೆಯಲ್ಲಿ ಪರ್ಸನಲ್ ಫೈಟ್‌ – ಮೋಕ್ಷಿತಾ, ಗೌತಮಿ, ಮಂಜುಗೆ ಕಿಚ್ಚನ ಕ್ಲಾಸ್..!

ಬಿಗ್​ಬಾಸ್ ಮನೆಯಲ್ಲಿ ಪರ್ಸನಲ್ ಫೈಟ್‌ – ಮೋಕ್ಷಿತಾ, ಗೌತಮಿ, ಮಂಜುಗೆ ಕಿಚ್ಚನ ಕ್ಲಾಸ್..!

ಬಿಗ್​ಬಾಸ್ ಕನ್ನಡ ಸೀಸನ್ 11 ಹತ್ತನೇ ವಾರಕ್ಕೆ ಕಾಲಿಡುತ್ತಿದ್ದು, ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಉಗ್ರಂ ಮಂಜು, ಮೋಕ್ಷಿತಾ ಹಾಗೂ ಗೌತಮಿಗೆ ಸುದೀಪ್ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್‌ ಬಾಸ್ ಮನೆಯ ಸಾಮ್ರಾಜ್ಯದಲ್ಲಿ ಮಹಾರಾಜರಾಗಿದ್ದ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ಅವರ ಮಧ್ಯೆ ಬಿಗ್ ಫೈಟ್ ನಡೆದಿತ್ತು. ಟಾಸ್ಕ್‌ನ ಹೊರೆತುಪಡಿಸಿ ಈ ಇಬ್ಬರು ಪರ್ಸನಲ್ ಆಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದರು. ಈ ಪರ್ಸನಲ್‌ ವಿಚಾರವನ್ನ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ಮಂಜು ಹಾಗೂ ಗೌತಮಿ ಅವರದ್ದು, ಮಾತುಗಳು ನನಗೆ ಹರ್ಟ್‌ ಆಯ್ತು, ಅದಕ್ಕೆ ನಾನು ಮಾತನಾಡಲು ಶುರು ಮಾಡಿದೆ ಎಂದಿದ್ದಾರೆ ಮೋಕ್ಷಿತಾ. ಅದೇ ವೇಳೆಗೆ ಕಿಚ್ಚ ಅವರು, ಗೌತಮಿ ಅವರಿಗೆ, ಯುವರಾಣಿ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಎಂದು ಆದೇಶ ನೀಡಿದಾಗ, ನೀವು ಅದನ್ನ ಒಪ್ಪಲ್ಲ ಯಾಕೆ? ಎಂದು ಕೇಳಿದ್ದಾರೆ. ಅದಕ್ಕೆ ಗೌತಮಿ ಅವರು ಮುಂಚೆ ನಾನು ಅದನ್ನ ಅಡ್ರೆಸ್‌ ಮಾಡಿದ್ದೆ ಎಂದರು.

ಈ ಬಗ್ಗೆ ಉಗ್ರಂ ಮಂಜು ಅವರನ್ನು ಕಿಚ್ಚ ಸಖತ್‌ ಆಗಿಯೇ ಕ್ಲಾಸ್‌ ತೆಗೆದುಕೊಂಡರು. ಬೇರೆ ಅವರಿಗೆ ಹೇಗೆ ನೀವು ಆದೇಶ ಕೊಡೋತ್ತೀರೋ ಅದೇ ರೀತಿ ಗೌತಮಿ ಅವರಿಗೂ ಹೇಳಬೇಕಿತ್ತು. ಪ್ರಜೆ ಮಾತಾಡ್ತಾ ಇದ್ದರೆ, ಗೌತಮಿ ಮಾತಾಡ್ತಾ ಇದ್ದರು. ಮೊದಲು ಸಂಬಂಧ, ಸಂಬಂಧ ಅಂತೀರಾ, ಆಮೇಲೆ ನನಗೆ ಮೋಸ ಆಯ್ತು ಅಂತೀರಾ. ನಂಬಿಕೆ ದ್ರೋಹ ಅಂತೀರಾ. ಯಾರು ಹೇಳಿದ್ರು ನಂಬಿ ಅಂತಾ? ಎಂದು ಕಿಚ್ಚ ಮಾಸ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಅವಧೂತ ಅರ್ಜುನ್​​​​ ಗುರೂಜಿ ಭೇಟಿಯಾದ ರೇಣುಕಾಚಾರ್ಯ..!

Leave a Comment

DG Ad

RELATED LATEST NEWS

Top Headlines

ಕೇರಳದಲ್ಲಿ ಭೀಕರ ಅಪಘಾತ.. ಐವರು MBBS ವಿದ್ಯಾರ್ಥಿಗಳ ದುರ್ಮರಣ..!

ಕೇರಳ : ಕೇರಳದ ಅಲಪ್ಪುಳದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೇವಾನಂದನ್, ಮುಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ,

Live Cricket

Add Your Heading Text Here