ಕಿಚ್ಚ ಸುದೀಪ್ ಅವರಿಗೆ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯೂ ಫ್ಯಾನ್ಸ್ ಇದ್ದಾರೆ. ಸುದೀಪ್ ಅವರು ಕಳೆದ 11 ವರ್ಷಗಳಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕಿಚ್ಚ ಸುದೀಪ್ ಅವರ ನಟನೆಗೆ ಅಷ್ಟೇ ಅಲ್ಲ ಅವರು ನಡೆಸಿಕೊಂಡುವ ಬಿಗ್ ಬಾಸ್ ಶೋಗೂ ಫ್ಯಾನ್ಸ್ ಇದ್ದಾರೆ.
ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗ ಸುದೀಪ್ ಅವರು ಏನು ಕುಡಿಯುತ್ತಾರೆ? ಎಂದು ತೆಲುಗು ಪ್ರೇಕ್ಷಕರಿಗೆ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೆ ಈಗ ಸ್ವತಃ ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ. ಹೌದು ನಾನು ಸ್ವಲ್ಪ ರಮ್, ವಿಸ್ಕಿ ಹಾಕಿ ಕುಡಿಯುತ್ತೀನಿ ಅಂತ ತಮಾಷೆ ಮಾಡಿದ್ದಾರೆ.
ಕೊಂಚ ರಮ್ ಉಂದಿ, ಕೊಂಚ ವಿಸ್ಕಿ ಉಂದಿ, ಕೊಂಚ ಟಕೀಲಾ ಉಂದಿ ಅನಿ ಥಿಂಕ್ ಚೈ ವದ್ದು. ಕಾಫಿ ಉಂದಿ. ಕಾನಿ ಈ ಕಂಟೆಸ್ಟೆಂಟ್ಕೋ ನಾಕು ಸಾರಾಯಿ ಕಾವಾಲಿ. ಇಕ್ಕಡ ಲೇದು ಎಂದು ಸುದೀಪ್ ಹೇಳಿದ್ದು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು. ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಜತೆ ಸಖತ್ ಮಜಾ ಮಾಡಿದ್ದಾರೆ.
ಕಿಚ್ಚ ಅವರು ಧನರಾಜ್ ಅವರಿಗೆ ಹನುಮಂತನಲ್ಲಿ ಏನು ಲೆಕ್ಕ ಇಡುತ್ತಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಧನರಾಜ್ ಅವರು ಹೂಸು ಎಂದರು.ಅದಕ್ಕೆ ಸುದೀಪ್ ಅವರು ಧನ್ಯವಾದ ಹನುಮಂತ ಅವರೇ. ಈ ವೇದಿಕೆ ಮೇಲೆ ಹೋಸ್ಟ್ ಆಗಿ, 11 ಸೀಸನ್‌ಗೆ ಒಬ್ಬವ್ಯಕ್ತಿಯ ಹೂಸಿನ ಬಗ್ಗೆ ಮಾತನಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ಇದನ್ನೂ ಓದಿ : ಬೈ ಎಲೆಕ್ಷನ್ ಭರಾಟೆ – ಇಂದು ಚನ್ನಪಟ್ಟಣ, ಶಿಗ್ಗಾಂವಿ ಪ್ರಚಾರಕ್ಕೆ ಧುಮುಕಲಿರೊ ಸಿಎಂ-ಡಿಸಿಎಂ..!