ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರದಿಂದಲು ಜಗದೀಶ್ ಅವರು ಸ್ಪರ್ಧಿಗಳ ಜತೆ ಕೂಗಾಡುತ್ತಲೇ ಇದ್ದರು. ಆದರೆ ನಿನ್ನೆಯ ಸಂಚಿಕೆಯಲ್ಲಿ ರಂಜಿತ್ ಹಾಗೂ ಜಗದೀಶ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರನ್ನೂ ಹೊರಗೆ ಹಾಕಿದ್ದಾರೆ. ಇದೀಗ ಈ ಸುದ್ದಿ ಸತ್ಯ ಎಂದು ಕನ್‌ಫರ್ಮ್ ಆಗಿದೆ.
ರಂಜಿತ್ ಹಾಗೂ ಜಗದೀಶ್ ಅವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಆಚೆಗೆ ಹೋಗಿದ್ದಾರೆ. ಇನ್ನು ರಂಜಿತ್ ಅವರು ಹೊರ ಹೋಗುತ್ತಿದ್ದಂತೆ ಮಾನಸ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಉಗ್ರಂ ಮಂಜು, ತ್ರಿವಿಕ್ರಮ್ ಸೇರಿದಂತೆ ಎಲ್ಲರೂ ರಂಜಿತ್ ಔಟ್ ಎನ್ನುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಲಾಯರ್ ಜಗದೀಶ್ ಔಟ್ ಆದ ಕೂಡಲೇ ಎಲ್ಲರೂ ಸಂಭ್ರಮಿಸಿದ್ದಾರೆ.
ಬಿಗ್ ಬಾಸ್ ಮೊದಲಿಗೆ ನೇರವಾಗಿ ಜಗದೀಶ್ ಅವರನ್ನು ಔಟ್ ಎಂದು ಘೋಷಿಸಿದರು. ಇದಾದ ಬಳಿಕ ರಂಜಿತ್ ಅವರು ದೈಹಿಕವಾಗಿ ರಂಜಿತ್ ಅವರು ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ಬಿಗ್ ಬಾಸ್ ಹೊರ ಕಳುಹಿಸಿದ್ದಾರೆ.
ಸದ್ಯ ರಾಮೋಹಳ್ಳಿಯ ಗೆಸ್ಟ್ ಹೌಸ್ನಲ್ಲಿ ಪ್ರತ್ಯೇಕ ರೂಮ್ನಲ್ಲಿ ಜಗದೀಶ್ ಹಾಗೂ ರಂಜಿತ್ ಉಳಿದುಕೊಂಡಿದ್ದಾರೆ ಎಂದು ಮೂಲ ತಿಳಿಸಿದೆ. ಇವತ್ತಿನ ಸಂಚಿಕೆ ಪ್ರಸಾರವಾದ ಬಳಿಕವಷ್ಟೆ ಉಳಿದ ಮಾಹಿತಿಯನ್ನು ಬಿಗ್ ಬಾಸ್ ತಂಡ ನೀಡಲಿದೆ.