ಬಿಗ್ಬಾಸ್ ಕನ್ನಡ ಸೀಸನ್ 11ರ 2ನೇ ವಾರದಲ್ಲಿ ಹಲವು ಸ್ಪರ್ಧಿಗಳ ಅಸಲಿ ಮುಖ ಅನಾವರಣವಾಗಿದ್ದು, ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. 2ನೇ ವಾರದಲ್ಲಿ ಮನೆಯ ಸದಸ್ಯರೆಲ್ಲಾ ಬ್ಲೈಡ್ ವಿಂಡೋ ಒಳಗೆ ಹೋಗಲೇ ಬಾರದು ಅನ್ನೋ ನಿಯಮವನ್ನು ಮುರಿದಿದ್ದರು. ತಾವೇ ಮಾಡಿಕೊಂಡ ತಪ್ಪಿನಿಂದಾಗಿ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಆದರೆ ನಿಜವಾಗಲೂ ತಪ್ಪು ಮಾಡಿದ್ದು ಯಾರು? ಸರಿ ಯಾರದ್ದು ಅನ್ನೋದರ ಬಗ್ಗೆ ವಾರದ ಕತೆಯಲ್ಲಿ ಚರ್ಚೆಯಾಗಲಿದೆ.
ಕಿಚ್ಚ ಸುದೀಪ್ ವಾರದ ಕತೆಯಲ್ಲಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಆಗಿದ್ದು ಹೇಗೆ ಅನ್ನೋದೇ ಈ ವಾರದ ಪಂಚಾಯ್ತಿಯಲ್ಲಿ ರೋಚಕವಾದ ಚರ್ಚೆಗೆ ಕಾರಣವಾಗಿದೆ. ಎಲ್ಲರ ಗೊಂದಲಕ್ಕೆ ಸ್ಪಷ್ಟನೆ ನೀಡಿರುವ ಕಿಚ್ಚ ಸುದೀಪ್ ಅವರು ಮಾನಸ ಅವರನ್ನ ಹೊರಗೆ ಹೋಗಿ ನೋಡಿಕೊಂಡು ಬಾ ಎಂದು ಮೊದಲು ಹಾಕೊಟ್ಟಿದ್ದೆ ಗೋಲ್ಡ್ ಸುರೇಶ್ ಅವರು ಎಂದಿದ್ದಾರೆ.
ಸುದೀಪ್ ಅವರ ಮಾತಿಗೆ ಶಾಕ್ ಆದ ಗೋಲ್ಡ್ ಸುರೇಶ್ ಅವರು ಮಾನಸ ಅವರು ಫಸ್ಟ್ ಹೋಗಿ ಬಂದ್ರು ಕಾಣಿಸಲಿಲ್ಲ ಅಂದ್ರು. ಹೀಗಾಗಿ ಹೇಳಿದೆ ಎಂದು ಒಪ್ಪಿಕೊಂಡಿದ್ದಾರೆ. ಇದಾದ ಮೇಲೆ ಅನುಷಾ ಹಾಗೂ ಸುರೇಶ್ ಅವರ ಜಗಳದ ಬಗ್ಗೆ ಚರ್ಚೆಯಾಗಿದೆ. ಅನುಷಾ ಅವರು ನಾನು ಸುರೇಶ್ ಅವರನ್ನ ಅಣ್ಣ ಅಂತ ಬಾಯಿ ತುಂಬಾ ಕರೆಯುತ್ತೇನೆ ಎಂದಿದ್ದಾರೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮಧ್ಯೆ ಅಣ್ಣ-ತಂಗಿ ಅನ್ನೋ ಮಾತಿಗೆ ಬೆಲೆಯಿಲ್ಲ. ಇದನ್ನು ಮನವರಿಕೆ ಮಾಡಿಕೊಟ್ಟಿರುವ ಕಿಚ್ಚ ಸುದೀಪ್ ಅವರು ಅಣ್ಣ ಅಂತ ಬಾಯಿ ತುಂಬಾ ಕರೆಯೋದು ಬಿಡಿ. ಅವರು ಸೋಲೋದು ನನಗೆ ಇಷ್ಟವಿಲ್ಲ ನಾನು ಮನೆಗೆ ಹೋಗ್ತೀನಿ ಅಂತ ಹೇಳಿ ಬನ್ನಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಇನ್ನು, ಗೋಲ್ಡ್ ಸುರೇಶ್ ಅವರಿಗೂ ಅಯ್ಯೋ ತಂಗಿ ಬಾಮ್ಮ ನೀನೇ ಗೆಲ್ಲು ಅಂತ ಕುತ್ತಿಗೆಯಲ್ಲಿರೋ ಚಿನ್ನ ಬಿಚ್ಚಿ ಕೊಡ್ತಾರಾ ಎಂದು ಸುದೀಪ್ ಕೇಳಿದ್ದಾರೆ. ಗೊತ್ತಿದ್ದು ಮಾಡೋದಕ್ಕೆ ಮಿಸ್ಟೇಕ್ ಅನ್ನಲ್ಲ ಸರ್ ಚಾಲೆಂಜಿಂಗ್ ಅಂತಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯೋ ಆಟಗಳೇ ಬೇರೆ ಅನ್ನೋದು ಎಲ್ಲಾ ಸ್ಪರ್ಧಿಗಳಿಗೆ ಈಗ ಅರ್ಥವಾಗುತ್ತಿದೆ. ಕಿಚ್ಚ ಸುದೀಪ್ ಅವರ ಖಡಕ್ ಮಾತುಗಳಿಂದ ಗೋಲ್ಡ್ ಸುರೇಶ್ ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ : ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ – 5ನೇ ಬಾರಿ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು..!