ಕಿಚ್ಚ ಸುದೀಪ್ ಅವರು ಬಿಗ್ ಬಾಸ್ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವಾಗ ದೊಡ್ಮನೆ ಒಳಗೆ ಬಂದು ಅಡುಗೆ ಮಾಡಿ ಹೋಗಿದ್ದರು. ಬಿಗ್‌ಬಾಸ್ ಸೀಸನ್ ಶುರುವಾದಾಗಿಂದ ಸಾಕಷ್ಟು ಸಲ ಬಿಗ್‌ಬಾಸ್ ಮನೆಯವರಿಗೆ ಕಿಚ್ಚ ಸುದೀಪ್ ಮಾಡಿರೋ ಅಡುಗೆ ಸವಿಯುವ ಸೌಭಾಗ್ಯ ಲಭಿಸಿತ್ತು.
ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಮಾಡೋ ಅಡುಗೆಗೆ ತುಂಬಾ ಡಿಮ್ಯಾಂಡ್ ಇದೆ. ಸದ್ಯ ಸುದೀಪ್ ಬಿಗ್‌ಬಾಸ್ ಮನೆಯ ಅಡುಗೆ ಮನೆಗೆ ಹೋಗಿ ಕೈಯ್ಯಾರೆ ಅಡುಗೆ ಮಾಡಿ ಬಡಿಸೋ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಸುದೀಪ್ ವೇಷ ಮರೆಸಿ ಅಡುಗೆ ಮನೆಗೆ ತೆರಳಿದ್ದಾರೆ. ಅವರ ಜೊತೆಗೆ ಇನ್ನೂ ಕೆಲ ಮಂದಿ ಇದ್ದಾರೆ. ಎಲ್ಲರೂ ಸೇರಿ ಬಿಗ್‌ಬಾಸ್ ಮನೆಯವರಿಗೆ ಬಿಸಿಬಿಸಿ ಅಡುಗೆ ಮಾಡಿ ಬಡಿಸಿದ್ದಾರೆ. ಶುರುವಿಗೆ ಇದ್ಯಾರು ಅಡುಗೆ ಮಾಡ್ತಿದ್ದಾರೆ ಅಂತ ಮನೆಮಂದಿಗೆ ಗೊತ್ತಾಗಿಲ್ಲ. ಆದರೆ ಅಡುಗೆ ಮಾಡಿದ ಬಳಿಕ ಕೊನೆಯಲ್ಲಿ ಒಬ್ಬೊಬ್ಬರ ಮುಖ ರಿವೀಲ್ ಆಗ್ತಾ ಹೋಗುತ್ತೆ.
ಇದು ನಡೆದಿರೋದು ಈ ಸೀಸನ್‌ನಲ್ಲಿ ಅಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 6 ನಲ್ಲಿ ಸುದೀಪ್ ಬಿಗ್‌ಬಾಸ್‌ಮನೆಗೇ ಹೋಗಿ ಅಡುಗೆ ಮಾಡಿ ಸರ್ಪ್ರೈಸ್ ಕೊಟ್ಟಿದ್ದರು. ಅಡುಗೆ ಮನೆಗೆ ಬಂದು ಕೆಲವರು ಅಡುಗೆ ಮಾಡಿ ಹೋಗಿದ್ದರು. ಅಲ್ಲಿ ಮುಖ ರಿವೀಲ್ ಆಗಿರಲಿಲ್ಲ. ಎಲ್ಲರೂ ಮುಖಕ್ಕೆ ಏನನ್ನೂ ಹಾಕಿಕೊಂಡು ಬಂದು ಅಡುಗೆ ಮಾಡಿದ್ದರು. ಅಲ್ಲಿ ಅಡುಗೆ ಮಾಡಿದವರು ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ಬಳಿಕ ಹೊರ ಬಂದು ಮುಖವನ್ನು ರಿವೀಲ್ ಮಾಡಲಾಯಿತು.
ಈ ವೇಳೆ ಒಬ್ಬೊಬ್ಬರಾಗಿಯೇ ಮುಖ ರಿವೀಲ್ ಮಾಡುತ್ತಾ ಹೋದರು. ಮೊದಲು ಚಂದನ್ ಕುಮಾರ್ ಅವರು ತಮ್ಮ ಮುಖ ತೋರಿಸಿದರು. ಹೀಗೆ, ಹಲವರು ಮುಖ ರಿವೀಲ್ ಮಾಡಿದರು. ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಮುಖವನ್ನು ತೋರಿಸಿದರು. ಈ ಸೀಸನ್‌ನಲ್ಲಿ ಇನ್ನೂ ಸುದೀಪ್ ಅಡುಗೆ ಸ್ಪೆಷಲ್ ಎಪಿಸೋಡ್ ನಡೆದಿಲ್ಲ. ಈ ಸೀಸನ್‌ನಲ್ಲಿ ಯಾರ್ಯಾರಿಗೆಲ್ಲ ಕಿಚ್ಚನ ಕೈ ರುಚಿ ನೋಡೋ ಭಾಗ್ಯ ಇದೆಯೋ ಕಾದುನೋಡಬೇಕು.
ಇದನ್ನೂ ಓದಿ : ‘ಛತ್ರಪತಿ ಶಿವಾಜಿ ಮಹಾರಾಜ್’ ಪಾತ್ರದಲ್ಲಿ ಡಿವೈನ್ ಸ್ಟಾರ್ - ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್..!