‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಕಿರಿಕ್ ಮಾಡುತ್ತಲೇ ಇರುತ್ತಾರೆ. ಇದೀಗ ಜಗದೀಶ್ ಹಾಗೂ ರಂಜಿತ್ ನಡುವೆ ಮಾರಾಮಾರಿ ನಡೆದಿದ್ದು, ಈ ಕಾರಣದಿಂದ ಇವರಿಬ್ಬರನ್ನು ಹೊರಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ಕಳೆದ ದಿನ ಬಿಗ್ ಬಾಸ್ ಶೋ ಬಗ್ಗೆ ಜಗದೀಶ್ ಅವಹೇಳನ ಮಾಡಿದ್ದರು, ಇದರಿಂದ ಕೆಂಡಾಮಂಡಲಾಗಿದ್ದ ಉಗ್ರಂ ಮಂಜು ಮಂಜು ಚಪ್ಪಲಿಯನ್ನ ಸಹ ಎಸೆದಿದ್ದರು. ಇದರ ಬೆನ್ನಲ್ಲೇ ಮತ್ತೆ ಜಗದೀಶ್ ಗಲಾಟೆ ಮಾಡಿದ್ದಾರೆ. ಬಿಗ್ ಬಾಸ್‌ನಲ್ಲಿ ನಾನು ಹೀರೋ ಆಗಬೇಕಿಲ್ಲ…ಯಾಕೆಂದ್ರೆ ರಿಯಲ್ ಲೈಫ್‌ನಲ್ಲಿ ನಾನು ಹೀರೋ. ವಿನ್ನರ್ ಆಗೋದು ಬೇಡ. 50 ಲಕ್ಷವೂ ಬೇಡ, ಅವರೇ ತೆಗೆದುಕೊಳ್ಳಲಿ. ಆ ಕಪ್ ತಗೊಂಡು ಮಾಡಬೇಕಾಗಿದ್ದು ಏನೂ ಇಲ್ಲ ಎಂದು ಜಗದೀಶ್ ಅವಹೇಳನ ಮಾಡಿದ್ದರು.
ನಿನ್ನೆ ಎಪಿಸೋಡ್‌ನಲ್ಲಿ ಜಗದೀಶ್ ಅವರನ್ನು ಕನ್‌ಫೆಶನ್ ರೂಂಗೆ ಕರೆದಿದ್ದರು. ಆ ಸಂದರ್ಭದಲ್ಲಿ ರಂಜಿತ್, ಅವನಿಗೆ ಆಚೆ ಬರಬೇಡ ಅಂತ ಹೇಳು ಬೆಳಗ್ಗೆವರೆಗು… ಬಂದ್ರೆ ಯಾರಾದ್ರು ಒಬ್ರಿಂದ ಒದೆ ತಿಂತಾನೆ ಅಂತ ಹೇಳಿದ್ದರು. ಅದಾದ ನಂತರ ಇವರಿಬ್ಬರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ವ್ಯಕ್ತಿಯೊಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದು, ಇದು ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ತೆಗೆಸಿಕೊಂಡ ಫೋಟೋ ಎನ್ನಲಾಗಿದೆ.
ಈ ವಿಚಾರವಾಗಿ ಕಲರ್ಸ್ ಕನ್ನಡದ ಬಳಿ ಬಿಟಿವಿ ಸ್ಟಷನೆ ಕೇಳಿದಾಗ ಈ ವಿಷಯವಾಗಿ ಎಪಿಸೋಡ್ ಮುಗಿದ ಮೇಲೆ ಕ್ಲಾರಿಟಿ ಕೊಡುತ್ತೇವೆ. ನಾವೇ ಅನೌನ್ಸ್ ಮಾಡ್ತೀವಿ ಅಂತ ಕಲರ್ಸ್ ಕನ್ನಡ ಹೇಳಿದೆ.
ಇದನ್ನೂ ಓದಿ : ದರ್ಶನ್ನ ಯಾರ್ ಬಿಟ್ರು ರೇಣುಕಾಸ್ವಾಮಿ ಪುತ್ರ ಬಿಡಲ್ಲ.. ಪಟ್ಟಣಗೆರೆ ಶೆಡ್‍ಗೆ ಎಳೆದೊಯ್ದು ಕೊಲ್ಲೋದು ಕನ್ಫರ್ಮ್ ಎಂದ ನೆಟ್ಟಿಗರು..!