ಬಿಗ್ಬಾಸ್ ಸಾಮ್ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಆಗಿದೆ. ಮಂಜು ಮತ್ತು ಮೋಕ್ಷಿತಾ ನಡುವಿನ ಸ್ವಾರ್ಥದ ಆಟವು ಟಾಸ್ಕ್ ರದ್ದತಿಗೆ ಕಾರಣವಾಯಿತು. ಆರಂಭದಲ್ಲಿ ಒಳ್ಳೆಯ ಬಾಂಧವ್ಯ ಹೊಂದಿದ್ದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಬಿಗ್ ಬಾಸ್ ಇದರಿಂದ ಬೇಸರಗೊಂಡು ಟಾಸ್ಕ್ ಅನ್ನು ರದ್ದುಗೊಳಿಸಿ, ಸ್ಪರ್ಧಿಗಳಿಗೆ ಶಿಕ್ಷೆ ವಿಧಿಸಿದರು. ಇದು ಮನೆಯ ಮೇಲೆ ದೊಡ್ಡ ಪರಿಣಾಮ ಬೀರಿತು.
ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ರಾಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ ಹಾಗೂ ಮೋಕ್ಷಿತಾರನ್ನು ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್ಬಾಸ್ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.
ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾರ ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯಗೌಡ ರೊಚ್ಚಿಗೆದ್ದಿದ್ದಾರೆ. ಬಂಧನಕ್ಕೆ ಒಳಗಾಗಿರುವ ದರ್ಬಾರಿಗಳನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಬೆಂಗಳೂರು : ಅಕ್ರಮ ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡ್ತಿದ್ದ ಆರೋಪಿ ಅರೆಸ್ಟ್..!