ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ನಿರೂಪಕನ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ನಟ ಕಿಚ್ಚ ಸುದೀಪ್ ಅಧಿಕೃತವಾಗಿ ಘೋಷಿಸಿದ್ದಾರೆ. 11 ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಕಿಚ್ಚ ಸುದೀಪ್ ಅವರು ಇದೀಗ ಕಾರ್ಯಕ್ರಮವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಈ ವಿಚಾರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ಬಿಗ್ ಬಾಸ್ ಶೋನ ಬಹುತೇಕ ಪ್ರೇಕ್ಷಕರು ಕಾಯೋದು ಶನಿವಾರ ಹಾಗೂ ಭಾನುವಾರ ನಡೆಯೋ ಕಿಚ್ಚನ ಪಂಚಾಯಿತಿಗಾಗಿಯೇ. ಸುದೀಪ್ ಅವರ ಖಡಕ್ ಮಾತು, ವಾರ್ನಿಂಗ್ ಕೊಡುವ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಗುಡ್ ಬೈ ಹೇಳುವುದಾಗಿ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಇದು BBK ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಸುದೀಪ್ ಘೋಷಿಸಿದ್ದಾರೆ. ಸುದೀಪ್ ಈ ನಿರ್ಧಾರಕ್ಕೆ ಕಾರಣ ಏನು ಅಂತ ಫ್ಯಾನ್ಸ್ ಕೇಳ್ತಿದ್ದಾರೆ. ಇದರ ನಡುವೆಯೇ ಬಿಗ್ ಬಾಸ್ ಹೋಸ್ಟ್ ಮಾಡಲು ಸುದೀಪ್ ಮಾಡಿಕೊಂಡ ಒಪ್ಪಂದದ ಸುದ್ದಿ ಕೂಡ ವೈರಲ್ ಆಗ್ತಿದೆ.
ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಅಗ್ರಿಮೆಂಟ್ 10 ಸೀಸನ್‌ಗೆ ಮಾತ್ರ ಆಗಿತ್ತಾ? ಎಷ್ಟು ವರ್ಷ ಅಗ್ರಿಮೆಂಟ್ ಮಾಡಿಕೊಂಡಿದ್ರು ಸುದೀಪ್ ಎನ್ನುವ ಚರ್ಚೆ ಜೋರಾಗಿದೆ. ಈ ಮೊದಲು ಐದು ಸೀಸನ್ ಗಳಿಗೆ ಮಾತ್ರ ಸುದೀಪ್ ಒಪ್ಪಂದ ಮಾಡಿಕೊಂಡಿದ್ರು ಎನ್ನಲಾಗ್ತಿದೆ. ಆ 5 ಸೀಸನ್ ಹೋಸ್ಟ್ ಮಾಡಿದ್ದಕ್ಕೆ ಸುದೀಪ್ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ರು ಎನ್ನಲಾಗಿದೆ. ಪ್ರತಿ ಸೀಸನ್‌ಗೆ ಅವರು 4 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗ್ತಿದೆ.
10 ಸೀಸನ್ಗಳ ಬಳಿಕ ಬಿಗ್ ಬಾಸ್ ನಿರೂಪಣೆ ಸಾಕಾಗಿದೆ ಎಂದಿದ್ದ ಸುದೀಪ್, ಚಾನೆಲ್ ನವರ ಮಾತಿಗೆ ಒಪ್ಪಿ ‘ಬಿಗ್ ಬಾಸ್ ಕನ್ನಡ ಸೀಸನ್ 11ರ ಶೋ ಹೋಸ್ಟ್ ಮಾಡಲು ಒಪ್ಪಿದ್ರು ಎನ್ನಲಾಗ್ತಿದೆ. ಸೀಸನ್ 11ಕ್ಕಾಗಿ ನಟ ಸುದೀಪ್ ಅವರು 8 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಂಭಾವನೆ ವಿಚಾರದಲ್ಲಿ ನಟ ಸುದೀಪ್ ಹಾಗೂ ಕಲರ್ಸ್ ವಾಹಿನಿಯ ಮೂಲದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇದನ್ನೂ ಓದಿ : ಕುಡಿದ ಮತ್ತಲ್ಲಿ ಗಲಾಟೆ – ಕುಚಿಕು ಗೆಳೆಯನನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ..!