ಬಿಗ್ ಬಾಸ್ನಿಂದ ಜಗದೀಶ್ ಎಲಿಮಿನೇಟ್ ಆದ ಬಳಿಕ ಮನೆ ಸೈಲೆಂಟ್ ಆಗಿತ್ತು. ಆದರೆ ಈಗ ಮತ್ತೆ ಜಗಳ ಶುರುವಾಗಿದೆ. ಕ್ಯಾಪ್ಟನ್ ಆಗಲು ಬಿಗ್ ಬಾಸ್ ನೀಡಿದ್ದ ಟಾಸ್ಕ್ ಆಡುವ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ಅವರು ಬಡಿದಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಕ್ಯಾಪ್ಟನ್ ಆಗೋದು ಎಷ್ಟು ಇಂಪಾರ್ಟೆಂಟ್ ಅನ್ನೋದು ಸ್ಪರ್ಧಿಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಕ್ಯಾಪ್ಟನ್ ಪಟ್ಟಕ್ಕಾಗಿ ಜೋರು ಪೈಪೋಟಿ ನಡೆಸುತ್ತಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಪೈಪೋಟಿ ಜೊತೆಗೆ ಜಗಳವೂ ಜೋರಾಗಿದೆ.
‘ಉಗ್ರಂ’ ಮಂಜು ಮತ್ತು ಶಿಶಿರ್ ಶಾಸ್ತ್ರಿ ಫೈಟ್ ಮಾಡಿಕೊಂಡಿದ್ದಾರೆ. ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಹೋಗೋ ಸೈಡಿಗೆ ಲೇಯ್.. ಎಂದು ‘ಉಗ್ರಂ’ ಮಂಜು ಆವಾಜ್ ಹಾಕಿದ್ದಾರೆ. ಅತ್ತ ಶಿಶಿರ್ ಕೂಡ ಜೋರು ಧ್ವನಿಯಲ್ಲಿ ಮಂಜು ಮೇಲೆ ಮುಗಿಬಿದ್ದಿದ್ದಾರೆ. ಇದನ್ನೆಲ್ಲಾ ಕಂಡು ಕ್ಯಾಪ್ಟನ್ಸಿ ಟಾಸ್ಕ್ ನಡೆಸುತ್ತಿರುವ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಹನುಮಂತ ಟೆನ್ಷನ್ ಆಗಿದ್ದಾರೆ.
ಇದನ್ನೂ ಓದಿ : ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಹುನ್ನಾರ – ಸಾಹಿತ್ಯ ವಲಯದಿಂದ ನಾಳೆ ಮಂಡ್ಯದಲ್ಲಿ ಪ್ರತಿರೋಧ..!