ಭಾರತದಲ್ಲಿ ಹಲವು ಭಾಷೆಗಳಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ.
ಈ ಶೋ ಆರಂಭದಿಂದ ಇಲ್ಲೀವರೆಗೂ ಇದು ಸ್ಕ್ರಿಪ್ಟ್ ಶೋ ಅನ್ನೋ ಆರೋಪ ಪದೆ ಪದೇ ಕೇಳಿಬರುತ್ತದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಏನು ಮಾತನಾಡಬೇಕು? ಹೇಗಿರಬೇಕು ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ ಅನ್ನೋ ಆರೋಪವಿದೆ. ಇದರ ಬೆನ್ನಲ್ಲೇ ಹಿಂದಿ ಬಿಗ್ ಬಾಸ್ 18ರ ಸ್ಪರ್ಧಿ ಈಶಾ ಸಿಂಗ್ ಕೈಯಲ್ಲಿ ಸ್ಕ್ರಿಪ್ಟ್ ಹಿಡಿದು ಓದುತ್ತಿರುವ ಫೋಟೋ ಒಂದು ವೈರಲ್ ಆಗಿದೆ.
ಹಿಂದಿ ಬಿಗ್ ಬಾಸ್ ಸೀಸನ್ 18 ಸ್ಪರ್ಧಿಗಳ ನಡುವಿನ ಒಡಕು, ವೈಮನಸ್ಸು, ಕಿತ್ತಾಟ, ಕಿರುಚಾಟದ ಮೂಲಕ ಅತೀ ಹೆಚ್ಚು ನಾಟಕೀಯ ವೇದಿಕೆಯಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಈ ಫೋಟೋ ಭಾರಿ ವಿವಾದವನ್ನು ಸೃಷ್ಟಿಸಿದೆ. ಈ ಫೋಟೋ ಬೆನ್ನಲ್ಲೇ ಬಿಗ್ ಬಾಸ್ ಸ್ಕಿಪ್ಟೆಡ್ ಶೋ ಎಂದು ಮತ್ತಷ್ಟು ಮಂದಿ ವಾದ ಮಾಡಿದ್ದಾರೆ.
ಈ ಫೋಟೋದಲ್ಲಿ ಈಶಾ ಸಿಂಗ್ ಹಾಗೂ ಇತರ ಕೆಲ ಸ್ಪರ್ಧಿಗಳು ಸ್ಕ್ರಿಪ್ಟ್ ಹಿಡಿದಿದ್ದಾರೆ ನಿಜ. ಆದರೆ ಈಶಾ ಸಿಂಗ್ ಬಿಗ್ ಬಾಸ್ ಆಟದ ಸ್ಕ್ರಿಪ್ಟ್ ಓದುತ್ತಿರಲಿಲ್ಲ. ವಾಸ್ತವವಾಗಿ, ಅವಳು ವಿಶೇಷ ವಿಭಾಗಕ್ಕೆ ತಯಾರಿ ನಡೆಸುತ್ತಿದ್ದಳು, ಅಲ್ಲಿ ಇಬ್ಬರು ಪ್ರಸಿದ್ಧ ರಾಪರ್‌ಗಳಾದ ಇಕ್ಕಾ ಸಿಂಗ್ ಮತ್ತು ರಾಫ್ತಾರ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ರ್ಯಾಪ್ ಚಾಲೆಂಜ್ ರೌಂಡ್‌ನಲ್ಲಿ ಪಾಲ್ಗೊಳ್ಳಲು ಈಶಾ ಸಿಂಗ್ ತಯಾರಿ ನಡೆಸಿದ್ದರೆ. ಈ ವೇಳೆ ರ್ಯಾಪ್ ಸಿಂಗರ್ ಜೊತೆ ಹಾಡಲು ತಯಾರಿ ಮಾಡಿಕೊಳ್ಳುತ್ತಿರುವ ರ್ಯಾಪ್ ಹಾಡಿನ ಲಿರಿಕ್ಸ್ ಇದು. ಲಿರಿಕ್ಸ್ ಬರೆದು ಅಭ್ಯಾಸ ಮಾಡುತ್ತಿರುವ ಫೋಟೋ ಇದಾಗಿದೆ ಎಂದು ಖುದ್ದು ಈಶಾ ಸಿಂಗ್ ಹಾಗೂ ಬಿಗ್ ಬಾಸ್ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ : BSY ಫ್ಯಾಮಿಲಿ ಹಲವರಿಗೆ ದ್ರೋಹ ಮಾಡಿದೆ – ಶಿಸ್ತು ಸಮಿತಿ ಮುಂದೆ ದೂರಿನ ಸರಮಾಲೆಯನ್ನೇ ಇಟ್ಟ ಯತ್ನಾಳ್..!