ಬಿಗ್ ಬಾಸ್ ಕನ್ನಡ ಸೀಸನ್ 11 ಹತ್ತನೇ ವಾರಕ್ಕೆ ಕಾಲಿಟ್ಟಿದ್ದು, ಈ ಶೋ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ಬಿಗ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದು ಇದರಲ್ಲಿ ಒಬ್ಬರು ಇಂದು ಹೊರ ಹೋಗಲಿದ್ದಾರೆ. ಅದು ಯಾರು ಎನ್ನುವುದೇ ಸಸ್ಪೆನ್ಸ್. ಆದರೆ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
ದೊಡ್ಮನೆಯಲ್ಲಿ 60 ದಿನಗಳನ್ನು ಪೂರೈಸಿರೋ ಐಶ್ವರ್ಯಾ ಅವರು ಮನರಂಜನೆ, ಫಿಸಿಕಲ್ ಟಾಸ್ಕ್ಗಳಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಶಿಶಿರ್ ಜೊತೆ ಹೈಲೆಟ್ ಆಗಿದ್ದೇ ಹೆಚ್ಚು. ಇದೀಗ ಅವರ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜನಾ? ಅನ್ನೊ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಇನ್ನೂ ಈ ವಾರದಲ್ಲಿ ಅವರು ಉತ್ತರ ಪ್ರದರ್ಶನ ನೀಡಿದ್ದು, ಮನೆ ಮಂದಿಯಿಂದ ಉತ್ತಮ ಪಟ್ಟ ಅವರಿಗೆ ಸಿಕ್ಕಿತ್ತು. ಕಳಪೆ ಆಟ ಎಂದು ಶೋಭಾ ಶೆಟ್ಟಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಐಶ್ವರ್ಯಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಫ್ಯಾನ್ಸ್‌ಗೆ ಅಚ್ಚರಿಯ ಜೊತೆ ಶಾಕ್ ಕೊಟ್ಟಿದೆ.
ಇದನ್ನೂ ಓದಿ : ಉಚ್ಚಾಟನೆ ಅಂತ ನೋಟಿಸ್ ಬರುತ್ತೆ ಆದ್ರೆ ಮಾಡಲ್ಲ – ಶಾಸಕ ಯತ್ನಾಳ್..!