ಬೀದರ್ : ಬಸ್ ಹಾಗೂ ಆಟೋ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೀದರ್ನ ಹೋನ್ನಕೇರಿ ಕ್ರಾಸ್ ಬಳಿ ನಡೆದಿದೆ. 45 ವರ್ಷದ ಅನಿತಾಬಾಯಿ ಹಾಗೂ ಅಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ಬೀದರ್ನಿಂದ ಮಹಾರಾಷ್ಟ್ರದ ಲಾತೂರ್ಗೆ ಹೋಗುತ್ತಿತ್ತು. ಈ ವೇಳೆ ಬಸ್ ಹಾಗೂ ಆಟೋ ಮಧ್ಯೆ ನಡೆದ ಭೀಕರ ಅಪಘಾತ ನಡೆದಿದೆ. ಘಟನೆಯ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳಗಳಿಗೆ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಜನವಾಡ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮಹಿಳೆಯರೇ ಹುಷಾರ್ – ಕಾಫಿಶಾಪ್ ವಾಶ್ ರೂಂನ ಡಸ್ಟ್ ಬಿನ್ನಲ್ಲಿತ್ತು ಸೀಕ್ರೆಟ್ ಮೊಬೈಲ್..!
Post Views: 128