ಬೀದರ್ : ಬೀದರ್ ಜಿಲ್ಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ 100 ಕೆ.ಜಿ. ಶ್ರೀಗಂಧ ಸೇರಿದಂತೆ ಒಟ್ಟು 55.60 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ, 9ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಕಳವು ಮಾಲು ವಶಕ್ಕೆ ಪಡೆಯಲಾಗಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಒಂದು, ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು, ಮನ್ನಾಏಖೆಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳನ್ನು ಬೇಧಿಸಲಾಗಿದೆ.
ಸಿನಿಮಾ ಸ್ಟೈಲ್ನಲ್ಲಿ ಬಸವಕಲ್ಯಾಣ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಹೀಂದ್ರಾ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 29 ಲಕ್ಷ ಮೌಲ್ಯದ 100 ಕೆ.ಜಿ. ಶ್ರೀಗಂಧದ ತುಂಡು ಜಪ್ತಿ ಮಾಡಿದ್ದಾರೆ. ಬಸವಕಲ್ಯಾಣದ ತ್ರಿಪುರಾಂತ ಸಮೀಪ ಹೋಗ್ತಿದ್ದ ಬೊಲೆರೋ ವಾಹನ ಹಿಂಬಾಲಿಸಿ ಪರಿಶೀಲಿಸಿದಾಗ ಶ್ರೀಗಂಧ ತುಂಡುಗಳ ಸಾಗಣೆ ಮಾಡ್ತಿರೋದು ತಿಳಿದು ಬಂದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ಅಟ್ಟಹಾಸ – ಏಕಾಏಕಿ ಮನೆಗೆ ನುಗ್ಗಿ 50ಕ್ಕೂ ಹೆಚ್ಚು ಪುಂಡರಿಂದ ದಾಂಧಲೆ..!