ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 81ನೇ ದಿನಕ್ಕೆ ಕಾಲಿಟ್ಟಿದೆ. ಈ ಹೊತ್ತಲ್ಲಿ ಸ್ಪರ್ಧಿಗಳು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 4 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದ ಐಶ್ವರ್ಯಾ ಹಾಗೂ ಭವ್ಯಾ ಗೌಡಗೆ ಬಿಗ್ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ.
ಆ್ಯಕ್ಟೀವಿಟಿ ರೂಮ್ನ ಲೈಟ್ ಕಾಲ ಕಾಲಕ್ಕೆ ಆಫ್ ಮತ್ತು ಆನ್ ಆಗುತ್ತಾ ಇರುತ್ತದೆ. ಆಗ ಒಂದೊಂದೇ ಬಾಕ್ಸ್ ಅನ್ನು ಆಯಾ ಬಣ್ಣವನ್ನು ಸೂಚಿಸುವ ಜಾಗದಲ್ಲಿ ಇಡಬೇಕು. ಯಾವ ಸ್ಪರ್ಧಿ ವೇಗವಾಗಿ ಈ ಟಾಸ್ಕ್ ಪೂರ್ಣಗೊಳಿಸುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂದು ಹೇಳಲಾಗಿತ್ತು.
ಅದರಂತೆ ಐಶ್ವರ್ಯಾ ಹಾಗೂ ಭವ್ಯಾ ಗೌಡ ಆ್ಯಕ್ಟೀವಿಟಿ ರೂಮ್ಗೆ ಹೋಗಿ ಈ ಟಾಸ್ಕ್ ಆಡಿದ್ದಾರೆ. ಇದೇ ಟಾಸ್ಕ್ನಲ್ಲಿ ಭವ್ಯಾ ಗೌಡ ಗೆದ್ದುಕೊಂಡಿದ್ದಾರೆ. ಅದರಂತೆ ಈ ವಾರದ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಮುಂದುವರೆಯಲಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ..!