ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ, ಸಿನಿಮಾ ನಿರ್ಮಾಪಕ ಭಾಮಾ ಹರೀಶ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಇಂದು ಬೆಳಿಗ್ಗೆ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಭಾಮಾ ಹರೀಶ್ ಅವರನ್ನು ತೀವ್ರ ನಿಗಾ ಘಟನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಭಾಮಾ ಹರೀಶ್ ಅವರಿಗೆ ಉಸಿರಾಟದ ಸಮಸ್ಯೆ ಜತೆಗೆ ಹೃದಯ ಬಡಿತದಲ್ಲೂ ಏರಿಳಿತ ಕಂಡುಬಂದಿತ್ತು. ಇದೇ ಕಾರಣಕ್ಕೆ ಅವರ ಕುಟುಂಬ ವರ್ಗದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವತ್ತು ವೈದ್ಯರು ಭಾಮಾ ಹರೀಶ್ ಗೆ ಅಂಜಿಯೋಗ್ರಾಮ್ ಮಾಡಲಿದ್ದು, ಬಳಿಕ ಹೆಲ್ತ್ ಕಂಡೀಷನ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಭಾಮಾ ಹರೀಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ‘ಮೆಜೆಸ್ಟಿಕ್’ ಸಿನಿಮಾದ ಸಹ ನಿರ್ಮಾಣ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳನ್ನು ಭಾಮಾ ಹರೀಶ್ ನಿರ್ಮಾಣ ಮಾಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿ ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿಕೊಂಡಿದ್ದಾರೆ. ಕೆಂಪೇಗೌಡ, ರಂಜಿಂತಾ, ಮಿಸ್ಟರ್ ಬಕ್ರಾ, ಮಿನುಗು, ಪಾಗಲ್, ಗನ್, ನಮಕ್ ಹರಾಮ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಸತೀಶ್ – ರಚಿತಾ ‘ಮ್ಯಾಟ್ನಿ’ ಸಿನಿಮಾಗೆ ಸಿಕ್ತು ಅವರ ಸಾಥ್ : ಡಿಂಪಲ್ ಕ್ವೀಲ್ ಡೆವಿಲ್ ಲುಕ್ ಗೆ ಫಿದಾ ಆದ ಆ ಸೂಪರ್ ಸ್ಟಾರ್..!