Download Our App

Follow us

Home » ಸಿನಿಮಾ » ‘ಭೈರತಿ ರಣಗಲ್’​ ರಿಲೀಸ್ ಡಿಲೇ ಬಗ್ಗೆ ಸತ್ಯ ಬಿಚ್ಚಿಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್..!

‘ಭೈರತಿ ರಣಗಲ್’​ ರಿಲೀಸ್ ಡಿಲೇ ಬಗ್ಗೆ ಸತ್ಯ ಬಿಚ್ಚಿಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್..!

ನರ್ತನ್ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಯದ ಭೈರತಿ ರಣಗಲ್ ಸಿನಿಮಾ ಇದೇ ತಿಂಗಳು ನ.15ಕ್ಕೆ ರಿಲೀಸ್ ಆಗಲಿದೆ. ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಯದ 126ನೇ ಸಿನಿಮಾವಾಗಿದ್ದು, ಈ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ಗೀತಾ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಇದೀಗ ಬಿಟಿವಿ ಸಂದರ್ಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭೈರತಿ ರಣಗಲ್​ ರಿಲೀಸ್ ಡಿಲೇ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ಶೂಟಿಂಗ್​​ನ ಅನುಭವ ತುಂಬಾ ಚೆನ್ನಾಗಿತ್ತು. ಡೈರೆಕ್ಟರ್ ಮೊದಲೇ ತಯಾರಿ ಮಾಡಿಕೊಂಡಿದ್ರು. ಎಲ್ಲಾ ಕಲಾವಿದರ ಡೇಟ್ಸ್ ಕೂಡ ಮ್ಯಾಚ್​ ಆಗಿದೆ. ಹಾಗಾಗಿ ಏನೂ ತೊಂದ್ರೆ ಆಗಿಲ್ಲ. ಆದ್ರೆ ವಿಶುವಲ್ಸ್ ಎಫೆಕ್ಟ್​ನಿಂದ ಸಿನಿಮಾ ರಿಲೀಸ್ ಮಾಡೋದು ಸ್ವಲ್ಪ ಡಿಲೇ ಆಯ್ತು ಎಂದಿದ್ದಾರೆ.

ಪ್ರತಿಯೊಂದು ಸಿನಿಮಾದಲ್ಲೂ ಪಾತ್ರ ಮಾಡೋವಾಗ್ಲೂ ಆಟ್ರಾಕ್ಟ್ ಆಗ್ಬೇಕು. ಈ ಸಿನಿಮಾದಲ್ಲಿ ಪಾತ್ರನೇ ಚೆನ್ನಾಗಿದೆ. ಚಿತ್ರದಲ್ಲಿ ಪಾಸಿಟಿವ್ ಆಗಿರುವ ಕಥೆಯಿದ್ದು, ವಿಭಿನ್ನವಾಗಿದೆ. ಅದನ್ನು ಪಾತ್ರದಲ್ಲಿ ತುಂಬಾ ಅದ್ಭುತವಾಗಿ ತೋರಿಸಲಾಗಿದೆ ಎಂದು ಶಿವರಾಜ್​​ ಕುಮಾರ್ ಹೇಳಿದ್ದಾರೆ.

ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ರಾಹುಲ್ ಬೋಸ್, ವಸಿಷ್ಠ ಸಿಂಹ, ಚಾಯಾ ಸಿಂಗ್, ಶಬ್ಬೀರ್ ಕಲ್ಲರಕ್ಕಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ : ಬೆಂಗಳೂರು : ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here