ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ನವೆಂಬರ್ 15ರಂದು ತೆರೆಕಂಡಿದ್ದ ಭೈರತಿ ರಣಗಲ್ ಈಗ ಮೂರು ದಿನಗಳ ಅವಧಿಯಲ್ಲಿ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಶಿವಣ್ಣನ ‘ಮಫ್ತಿ’ ಮ್ಯಾನರಿಸಂ, ಲುಕ್ ಕನ್ನಡಿಗರಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.
ಎರಡನೇ ದಿನದಿಂದ 320ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ‘ಭೈರತಿ ರಣಗಲ್’ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೊಂದು ಹಿಟ್ ಸಿನಿಮಾ ಕೊಡುವ ಲಕ್ಷಣಗಳು ಕಾಣಿಸುತ್ತಿದೆ. ಭೈರತಿ ರಣಗಲ್’ ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಹೆಚ್ಚು ಸಿನಿಮಾಗಳನ್ನು ನಿರೀಕ್ಷೆ ಮಾಡಬಹುದು.
ಈ ವರ್ಷದ ಸಿನಿಮಾ ‘ಭೈರತಿ ರಣಗಲ್’ ಉತ್ತಮ ಓಪನಿಂಗ್ ಪಡೆದುಕೊಂಡಿದೆ. 3ನೇ ದಿನವೂ ಈ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿ ಇದೆ. ಮೊದಲ ಎರಡು ದಿನವೂ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ಅದು ಮೂರನೇ ದಿನವೂ ಮುಂದುವರೆದಿದೆ. ಇಂಡಸ್ಟ್ರಿ ಟ್ರೇಡ್ ಎಕ್ಸ್‌ಪರ್ಟ್ sacnilk ಪ್ರಕಾರ, ಈ ಸಿನಿಮಾ 2.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ, ಡಿಸ್ಟ್ರಿಬ್ಯೂಟರ್ ಸೆಕ್ಟರ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ 2.30 ಕೋಟಿ ರೂಪಾಯಿಯಿಂದ 2.50 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿದೆ ಎಂದು ಹೇಳುತ್ತಿದ್ದಾರೆ.
‘ಭೈರತಿ ರಣಗಲ್’ ಈ ವರ್ಷದಲ್ಲಿ ಕನ್ನಡದ ಅತ್ಯುತ್ತಮ ಗಳಿಕೆ ಕಂಡ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕೂಡ ಇವೆ. ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಕಾಂಬಿನೇಷನ್ ವರ್ಕ್‌ಔಟ್ ಆಗಿದ್ದು, ಕಳೆದ ಮೂರು ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ : ಸಿದ್ದರಾಮಯ್ಯ-ವಿ ಸೋಮಣ್ಣ ಮುಖಾಮುಖಿ – ಮುಡಾ ಸೈಟ್ ಬಗ್ಗೆ ಮಾತ್ನಾಡಿಕೊಂಡ ನಾಯಕರು..!