ಬೆಳಗಾವಿ : ಮುಡಾ ಕೇಸ್ನಲ್ಲಿ ನಾವು ನೇಣು ಹಾಕ್ಕೊಳ್ಳೋಕ್ಕಾಗುತ್ತಾ..? ಬಿಜೆಪಿ-ಜೆಡಿಎಸ್ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮುಡಾ ವಿಚಾರ ಇಟ್ಕೊಂಡು ಸದನದ ಸಮಯ ಹಾಳು ಮಾಡ್ತಾರೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ರಾಜಕೀಯ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದಿ ಪತ್ರ ಬರೆದ ಮಾತ್ರಕ್ಕೆ ಅದೇನು ಕೋರ್ಟಾ, ಈ ದೇಶದಲ್ಲಿ ಇನ್ನೂ ನ್ಯಾಯಾಂಗ ಅನ್ನೋದು ಇದೆ. ಮುಡಾ ಪತ್ರ ಬರೆದ ಮಾತ್ರಕ್ಕೆ ಎಲ್ಲಾ ಸಾಬೀತಾಗಲ್ಲ, ತನಿಖೆ ಮಾಡ್ಬೇಕು, ಕೋರ್ಟ್ಗಳಲ್ಲಿ ವಿಚಾರಣೆ ಆಗ್ಬೇಕು. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ.
ಜನವರಿ ಡೆಡ್ಲೈನ್ ಸಿದ್ದರಾಮಯ್ಯಗಲ್ಲ ವಿಜಯೇಂದ್ರಗೆ. ಯತ್ನಾಳ್, ಜಾರಕಿಹೊಳಿ ಡೆಡ್ಲೈನ್ ಕೊಟ್ಟಿರಬಹುದು. ಜನವರಿಗೆ ವಿಜಯೇಂದ್ರ ರಾಜೀನಾಮೆ ಕೊಡಬಹುದು ಎಂದು ಸಚಿವ ಭೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಜಗತ್ತಿನಾದ್ಯಾಂತ ಹೆಚ್ಚಾಯ್ತು ‘ಬ್ಲೀಡಿಂಗ್ ಐ’ ವೈರಸ್ ಭೀತಿ.. ಈ ರೋಗದ ಲಕ್ಷಣಗಳೇನು ಗೊತ್ತಾ?