ಬೆಂಗಳೂರು : ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (ನೈಸ್) ಬೆಂಗಳೂರಿನ 41ಕಿಮೀ ಪೆರಿಫೆರಲ್ ರಸ್ತೆಯ ಅಸಾಧಾರಣ ಕೆಲಸಕ್ಕಾಗಿ 2024ರ ಪ್ರತಿಷ್ಠಿತ ಕನ್‌ಸ್ಟ್ರಕ್ಷನ್ ‘ಟೈಮ್ಸ್ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಇನ್ನು ಈ ಯೋಜನೆಯು ಭಾರತದ ಅತ್ಯುತ್ತಮ ಕಾಂಕ್ರೀಟ್ ರಸ್ತೆ (ರಿಜಿಡ್ ಪೇವ್‌ಮೆಂಟ್) ನಿರ್ಮಾಣ ಮತ್ತು ನಿರ್ವಹಣೆ ಎಂದು ಗುರುತಿಸಲ್ಪಟ್ಟಿದೆ.
ನೈಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ್ ಖೇಣಿ ಅವರು ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ‘ಆತ್ಮೀಯ ಬೆಂಗಳೂರು, ನಮ್ಮ NICE ರಸ್ತೆಯು ಕನ್‌ಸ್ಟ್ರಕ್ಷನ್ ಟೈಮ್ಸ್ ಅವಾರ್ಡ್ಸ್‌ನಿಂದ ಪ್ರತಿಷ್ಠಿತ “ಅತ್ಯುತ್ತಮ ಕಾಂಕ್ರೀಟ್ ರಸ್ತೆ – ನಿರ್ಮಾಣ ಮತ್ತು ನಿರ್ವಹಣೆ” ಪ್ರಶಸ್ತಿ ಪಡೆದಿದೆ. ಈ ಮನ್ನಣೆಯು ಗುಣಮಟ್ಟ, ಬಾಳಿಕೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ. ಇದು ನಾವೆಲ್ಲರೂ ಹೆಮ್ಮೆಪಡುವ ವಿಷಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಶೋಕ್ ಖೇಣಿ ಅವರಿಗೆ ಸಾರ್ವಜನಿಕರೂ ಕೂಡ ಅಭಿನಂದನೆ ಸಲ್ಲಿಸಿದ್ದು, ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಾನು ಈ ರಸ್ತೆಯಲ್ಲಿ ಸಂಚರಿಸಿದಾಗಲೆಲ್ಲಾ ನನ್ನ ಸಹ ಪ್ರಯಾಣಿಕರಿಗೆ ಹೆಮ್ಮೆಯಿಂದ ಹೇಳುತ್ತೇನೆ, ಇದು ನನ್ನ ಜಿಲ್ಲೆಯವರೇ ಆದ ನಾಯಕರೊಬ್ಬರು ನಿರ್ಮಿಸಿದ ರಸ್ತೆ ಎಂದು. ನೀವು ನಮಗೆಲ್ಲ ಸ್ಪೂರ್ತಿದಾಯಕ ಉದಾಹರಣೆ ಎಂದು ಅಶೋಕ್ ಖೇಣಿ ಅವರಿಗೆ ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ನೈಸ್ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಅಂಶಗಳು ಹೀಗಿವೆ : NICE ರಸ್ತೆಯ ಕಟ್ಟುನಿಟ್ಟಾದ ಪಾದಚಾರಿ ನಿರ್ಮಾಣ ಮತ್ತು ನಿರ್ವಹಣೆಯು ಉದ್ಯಮದಲ್ಲಿ ಹೊಸ ಮಾನದಂಡವನ್ನು ಹೊಂದಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ವ್ಯಾಪಿಸಿರುವ 41 ಕಿಮೀ ಪೆರಿಫೆರಲ್ ರಸ್ತೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇನ್ನು ಬಾಳಿಕೆ ಮತ್ತು ದೀರ್ಘಾಯುಷ್ಯವನ್ನು ಹೊಂದಿದ್ದು, NICE ಪರಿಸರದ ಪರಿಗಣನೆಗಳಿಗೆ ಆದ್ಯತೆ ನೀಡುತ್ತದೆ. ಪರಿಸರ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು..!