ಬೆಂಗಳೂರು : ಮದುವೆಯಾದ ಒಂದುವರೆ ವರ್ಷಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾರತಿ ಆತ್ಮಹತ್ಯೆಗೆ ಶರಣಾದ ಯುವತಿ.
ಯುವತಿ ಮೃತದೇಹ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾಗಿ ಯುವತಿ ಕುಟುಂಬದವರು ದೂರು ದಾಖಲಿಸಿ ಗಂಡನ ಮನೆಯವರ ವಿರುದ್ದ ಅನುಮಾನ ವ್ಯಕ್ತಪಡಿಸಿದ್ದಾರೆ.
ಭಾರತಿ ಹಾಗೂ ಲೋಕೆಶ್ ಮದುವೆಯಾಗಿ ಒಂದುವರೆ ವರ್ಷ ಆಗಿತ್ತು. ಪದೇ ಪದೇ ಗಂಡನ ಮನೆಯವರು ಭಾರತಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸಂಜೆ 5 ಗಂಟೆಗೆ ಸುಮಾರಿಗೆ ಗಂಡನ ಮನೆಯಲ್ಲಿ ಭಾರತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಅನುಮಾನಾಸ್ಪದ ಸಾವು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಹುಡುಗ ಹೀಗಿದ್ರೆ ಮಾತ್ರ ಮದುವೆಯಾಗಿ, ಇಲ್ಲಾಂದ್ರೆ ಬೇರೊಬ್ಬನ್ನ ಹುಡುಕಿ ಅಷ್ಟೇ – ಯುವತಿಯರಿಗೆ ತನಿಷಾ ಕಿವಿಮಾತು..!
Post Views: 136