Download Our App

Follow us

Home » ಮೆಟ್ರೋ » ಬೆಂಗಳೂರು : ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ..!

ಬೆಂಗಳೂರು : ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ..!

ಬೆಂಗಳೂರು : ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹೆಣ್ಣೂರಿನ ಥಣಿಸಂದ್ರದಲ್ಲಿ ನಡೆದಿದೆ. ಅಯ್ಯಪ್ಪ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.

ಅಯ್ಯಪ್ಪ ಬಿಎಸ್​ಸಿ ಎರಡನೇ ವರ್ಷದಲ್ಲಿ ವ್ಯಾಸಾಂಗ ಮಾಡ್ತಿದ್ದ. ಆತನ ತಂದೆ ಆರು ವರ್ಷದ ಹಿಂದೆ ಮೃತಪಟ್ಟಿದ್ದರು. ಅಕ್ಕನಿಗೆ ಮದಿವೆಯಾಗಿ ಗಂಡನ ಮನೆ ಸೇರಿದ್ರು. ಅಯ್ಯಪ್ಪ ತನ್ನ ತಾಯಿ ಜೊತೆಗೆ ಹೆಣ್ಣೂರಿನ ಥಣಿಸಂದ್ರದಲ್ಲಿ ವಾಸವಿದ್ದ. ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸಿತ್ತಿದ್ದರು. ಮಗನಿಗೆ ಬೈಕ್ ಕೊಡಿಸಲು ಒಂದೆಡೆ ಬಡತನ ಕೂಡ ಅಡ್ಡಿಯಾಗಿತ್ತು.

ಇದರಿಂದ ಸ್ವಲ್ಪ ದಿನ ಕಾಯುವಂತೆ ತಾಯಿ ಮಗ ಅಯ್ಯಪ್ಪನಿಗೆ ಹೇಳಿದ್ದರು. ಅಲ್ಲದೇ ಬೈಕ್ ಕೊಡಿಸಲು 50 ಸಾವಿರ ಸಾಲ‌ ಮಾಡಿದ್ದರು. ತಾಯಿ ಇನ್ನು ಎರಡು ದಿನದಲ್ಲಿ ಬೈಕ್ ಕೊಡಿಸಲು ನಿರ್ಧರಿಸಿದ್ದರು. ಅಷ್ಟರಲ್ಲಾಗಲೇ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಯಿ ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಸಂಜೆ 4:30ಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹ ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆಯ ಸಂಬಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : “ವೆಟ್ಟೈಯಾನ್” ಚಿತ್ರದ ಫಸ್ಟ್​​ ಸಾಂಗ್ ರಿಲೀಸ್ – ತಲೈವಾ ಜೊತೆ ಮಂಜು ವಾರಿಯರ್ ಸಖತ್ ಸ್ಟೆಪ್​..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here