ಬೆಂಗಳೂರು : ಯುವತಿಯರೇ ಡ್ರೈವಿಂಗ್ ಸ್ಕೂಲ್ಗೆ ಹೋಗೋ ಮುನ್ನ ಎಚ್ಚರ. ಟ್ರೈನರ್ ಒಬ್ಬ ಕಾರ್ ಡ್ರೈವಿಂಗ್ ಹೇಳಿಕೊಡೋ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.
ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಯುವತಿ ಟ್ರೈನಿಂಗ್‌ಗೆ ಸೇರಿದ್ದರು. ಈ ವೇಳೆ ಅಣ್ಣಪ್ಪ ಎಂಬಾತ ಪರ್ಸನಲ್ ಟ್ರೈನರ್ ಆಗಿ ಡ್ರೈವಿಂಗ್ ಕಲಿಸಿಕೊಡಲು ಮುಂದಾಗಿದ್ದ. ಆದರೆ ಕಳೆದ ವಾರ ಬೆಳಗ್ಗೆ 6.30ಕ್ಕೆ ಕಾರ್ ಡ್ರೈವಿಂಗ್ ಟ್ರೈನರ್ ಅಣ್ಣಪ್ಪ 18 ವರ್ಷದ ಯುವತಿಯ ಜೊತೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್ ಅಸಭ್ಯ ವರ್ತನೆ ತೋರಿದ್ದಾನೆ.
ಯುವತಿ ಪಕ್ಕದಲ್ಲಿ ಕೂತು ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಈ ಬಗ್ಗೆ ಬಸವೇಶ್ವರ ನಗರ ಠಾಣೆಗೆ ಯುವತಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಅಣ್ಣಪ್ಪನ ವಿರುದ್ಧ FIR ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ – ದರ್ಶನ್ ಗ್ಯಾಂಗ್ ವಿರುದ್ದ ಸಿಗ್ತು ಸ್ಟ್ರಾಂಗ್ ಎವಿಡೆನ್ಸ್! ಏನದು ಗೊತ್ತಾ?