ಕನ್ನಡ ‘ಬಿಗ್ಬಾಸ್ ಸೀಸನ್ 11’ 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರತಿ ಶನಿವಾರದಂತೆ ಸುದೀಪ್, ಇಡೀ ವಾರದ ವಿಶ್ಲೇಷಣೆ ಮಾಡಿದ್ದಾರೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಆಡಿದ ವಿಚಾರಕ್ಕೆ ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ್ದು, ಇದೇ ವೇಳೆ ಸ್ವಲ್ಪ ಗರಂ ಆಗಿದ್ದಾರೆ. ‘ನಿವೇಲ್ಲರು ಒಂದು ಯೋಚನೆ ಮಾಡಲೇಬೇಕು. ದಯವಿಟ್ಟು ನೀವುಗಳೇ ಬಿಗ್ಬಾಸ್ ಆಗೋದಕ್ಕೆ ಹೋಗಬೇಡಿ, ಕಿಚ್ಚನ ಚಪ್ಪಾಳೆ ಆಗೋದಕ್ಕೆ ಹೋಗಬೇಡಿ, ನಾನು ನನ್ನ ತಟ್ಟೆ, ನನ್ನ ಅನ್ನ, ನನ್ನ ಟಾಸ್ಕ್ ಅಂತ ಇದ್ರೆ ಎಲ್ಲರಿಗೂ ಒಳ್ಳೆಯದು. ಇಲ್ಲಿ ಯಾರು ದೇವರು ಆಗೋದಕ್ಕೆ ಹೋಗಬೇಡಿ ಅಂತ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನು ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ತ್ರೀವಿಕ್ರಮ್, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಾಮಿನೇಟ್ ಆಗಿದ್ದರು. ಇವರಲ್ಲಿ ಈಗಾಗಲೇ ಗೋಲ್ಡ್ ಸುರೇಶ್ ಹಾಗೂ ತ್ರೀವಿಕ್ರಮ್ ಸೇಪ್ ಆಗಿದ್ದಾರೆ.
ಶೋಭಾ ಶೆಟ್ಟಿ, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ಈ ಐದು ಜನ ಇನ್ನೂ ನಾಮಿನೇಷನ್ ಜಾಗದಲ್ಲೇ ಇದ್ದಾರೆ. ಇಂದಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಬಿಗ್ಬಾಸ್ ಮನೆಯ ಆಟವನ್ನು ಮುಗಿಸಲಿದ್ದಾರೆ. ಯಾರು ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗೋ ಸ್ಪರ್ಧಿ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ : ಎಸ್. ಭಗತ್ ರಾಜ್ ನಿರ್ದೇಶನದ ‘ಠಾಣೆ’ ಚಿತ್ರಕ್ಕೆ ಶುಭ ಹಾರೈಸಿದ ಶ್ರೀ ರವಿಶಂಕರ್ ಗುರೂಜಿ..!