ಕೋಲಾರ : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೀಗ ಮಾಜಿ ಸಚಿವ ರೇಣುಕಚಾರ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ರನ್ನು ಹಿಂದು ಹುಲಿಯಲ್ಲ , ಅವರು ಹಿಂದು ಇಲಿ ಎಂದು ಹೇಳಿದ್ದಾರೆ.
ಬಸನಗೌಡ ಯತ್ನಾಳ್ ವಿರುದ್ದ ಗುಡುಗಿದ ರೇಣುಕಾಚಾರ್ಯ ಅವರು, ದಿವಂಗತ ಅನಂತ್ ಕುಮಾರ್ ಬಿಜೆಪಿ ಪಕ್ಷ ಕಟ್ಟಿದ್ರು. ಬಿಜೆಪಿ ಕಟ್ಟಿದವರ ವಿರುದ್ದ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ ಎಂದಿದ್ದಾರೆ.
ಇನ್ನು ವಕ್ಪ್ ವಿರುದ್ದ ಹೋರಾಡು ಅಂತಾ ರಾಷ್ಟ್ರೀಯ ನಾಯಕರು ಹೇಳಿಲ್ಲ. ಯತ್ನಾಳ್ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ ವಿಜಯೇಂದ್ರ ಮುಂದೆ ರಾಜ್ಯದ ಸಿಎಂ ಆಗಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ : ನಮ್ಮ ಮೇಲೆ ನಾವೇ ಯುದ್ಧ ಮಾಡೋದು ಸರಿಯಲ್ಲ – ಯತ್ನಾಳ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ..!
Post Views: 51