ಬೆಂಗಳೂರು : ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಮೊಬೈಲ್ ಶೋರೂಂ ಮಾಲೀಕರೇ ಎಚ್ಚರ. ಕುಖ್ಯಾತ ಬೆಡ್ ಶೀಟ್ ಗ್ಯಾಂಗ್ವೊಂದು ಮಧ್ಯರಾತ್ರಿ ಮೊಬೈಲ್ ಶೋರೂಂ ಶೆಟರ್ ಮುರಿದು ಕನ್ನ ಹಾಕ್ತಿದ್ದಾರೆ. ಈಗ ಬೈಯಪ್ಪನಹಳ್ಳಿ ಪೊಲೀಸರು 8 ಮಂದಿ ಕುಖ್ಯಾತ ಬೆಡ್ ಶೀಟ್ ಗ್ಯಾಂಗ್ನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ಬೆಡ್ ಶೀಟ್ ಗ್ಯಾಂಗ್ ಪ್ರಮುಖ ನಗರಗಳಲ್ಲಿ ಶೋರೂಂಗಳ ಶಟರ್ ಮುರಿದು ಕಳ್ಳತನ ಮಾಡ್ತಿತ್ತು. ಇಮ್ತಿಯಾಜ್ ಆಲಂ, ಜಾವೇದ್ ಆಲಂ, ಪವನ್ ಶಾ, ಮುನಿಲ್ ಕುಮಾರ್, ರಿಜ್ವಾನ್ ದೇವನ್, ಸಲೀಮ್ ಅಲಂ, ರಾಮೇಶ್ವರ್ ಗಿರಿ, ಹಾಗೂ ಶಿವರಾಜ್ ಕುಮಾರ್ ಬಂಧಿತ ಬಿಹಾರಿ ಗ್ಯಾಂಗ್. ಈ ಗ್ಯಾಂಗ್ ಮುಂಬಯಿ, ದೆಹಲಿ, ಬಿಹಾರ, ಉತ್ತರ ಕನ್ನಡ, ಕಾರವಾರ ಹಾಗೆಯೇ ಇತ್ತೀಚಿಗೆ ಬೆಂಗಳೂರಿನಲ್ಲೂ ಕಳ್ಳತನದ ಕೃತ್ಯವೆಸಗಿತ್ತು.
ಬಿಹಾರಿ ಗ್ಯಾಂಗ್ ಬೈಯಪ್ಪನಹಳ್ಳಿಯ ನಾಗವಾರಪಾಳ್ಯದ ಎ.ಎಂ ಸ್ಯಾಮ್ಸಂಗ್ ಶೋರೂಂಗೆ ನುಗ್ಗಿತ್ತು. ಶೋರೂಂ ಬಳಿ ಅಳವಡಿಸಿದ್ದ ಸಿಸಿಟಿವಿಗೆ ಬೆಡ್ ಶೀಟ್ನ್ನು ಹಿಡಿದು ಖದೀಮರು ಶೆಟರ್ ಹೊಡೆದಿದ್ದಾರೆ. ಶೋ ರೂಂಗೆ ನುಗ್ಗಿ 22 ಲಕ್ಷ ರೂಪಾಯಿ ಬೆಲೆಬಾಳುವ ಸ್ಯಾಮ್ಸಂಗ್ ಮೊಬೈಲ್ಗಳನ್ನು ಕದ್ದು ಪರಾರಿಯಾಗಿದ್ದರು. ಕೂಲಿಕೆಲಸಕ್ಕಾಗಿ ಬಂದ ಕಾರ್ಮಿಕರ ಜತೆ ಸೇರಿಕೊಂಡು ಖದೀಮರು ಪೊಲೀಸರ ಕಣ್ಣು ತಪ್ಪಿಸುತ್ತಿದ್ದರು.
ಬೊಮ್ಮನಹಳ್ಳಿ ಭಾಗದಲ್ಲಿ ಅಡಗಿ ಕೂತಿದ್ದ ಬಿಹಾರಿ ಗ್ಯಾಂಗ್ನ್ನು ಈಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಟೆಕ್ನಿಕಲ್ ಸಪೋರ್ಟ್ ನಿಂದ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಕದ್ದ ಮೊಬೈಲ್ಗಳನ್ನು ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡಿರೋದು ಬಯಲಾಗಿದೆ.
ಇದನ್ನೂ ಓದಿ : ಬಿಟಿವಿ ವರದಿಯ ಬಿಗ್ ಇಂಪ್ಯಾಕ್ಟ್ – BBMP ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್..!