ಬೆಂಗಳೂರು : ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರೇಯಿಸಿ ಕೂಡ ಆತ್ಮಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 23 ವರ್ಷದ ಜಾನ್ಸನ್, 25 ವರ್ಷದ ದಿಲ್ಯಾದ್ ಮೃತ ಪ್ರೇಮಿಗಳು.
ಥಣಿಸಂದ್ರ ಮೂಲದ ಜಾನ್ಸನ್ ಎಂಬುವವನನ್ನು ದಿಲ್ಶಾದ್ ಪ್ರೀತಿಸುತ್ತಿದ್ದಳು. ಆದರೆ ಮಹಿಳೆಗೆ ಈಗಾಗಲೇ ಮದುವೆಯಾಗಿತ್ತು. ಅದಾಗ್ಯೂ ಜಾನ್ಸನ್ -ದಿಲ್ಶಾದ್ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಸಮಾಜ ನಮ್ಮ ಪ್ರೀತಿ ಒಪ್ಪಲ್ಲ ಎಂದು ಮನನೊಂದಿದ್ದ ಜಾನ್ಸನ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ.
ಜಾನ್ಸನ್ ಆತ್ಮಹತ್ಯೆಯಿಂದ ಮನನೊಂದಿದ್ದ ಮಹಿಳೆ ಇಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : “ರುದ್ರ ಗರುಡ ಪುರಾಣ”ದ ಮತ್ತೊಂದು ಸಾಂಗ್ ರಿಲೀಸ್ – ಜ.24ಕ್ಕೆ ಸಿನಿಮಾ ತೆರೆಗೆ..!
Post Views: 689