Download Our App

Follow us

Home » ಅಪರಾಧ » ಬೆಂಗಳೂರು : ಅಕ್ರಮ ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್‌ ಮಾಡಿಕೊಡ್ತಿದ್ದ ಆರೋಪಿ ಅರೆಸ್ಟ್..!

ಬೆಂಗಳೂರು : ಅಕ್ರಮ ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್‌ ಮಾಡಿಕೊಡ್ತಿದ್ದ ಆರೋಪಿ ಅರೆಸ್ಟ್..!

ಬೆಂಗಳೂರು : ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದವರಿಗೆ ನಕಲಿ ಗರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಸೂರ್ಯಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರ್ನಾಬ್ ಮಂಡಲ್ ಬಂಧಿತ ಆರೋಪಿ.

ಆರೋಪಿ ಅರ್ನಾಬ್ ಮಂಡಲ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಬೆಂಗಳೂರು ಹೊರವಲಯದ ಸೂರ್ಯಸಿಟಿ ಬಳಿ ಸೈಬರ್​ ಸೆಂಟರ್ ತೆರೆದಿದ್ದನು. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ಪ್ರಜೆಗಳಿಗೆ ಅರ್ನಾಬ್ ಮಂಡಲ್ 8 ಸಾವಿರ ಕೊಟ್ರೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಆಧಾರ್ ಕಾರ್ಡ್ ಕೊಡ್ತಿದ್ದ. ಈ ಆರೋಪಿ ಹಲವು ಮಂದಿ ಬಾಂಗ್ಲಾದೇಶ ಪ್ರಜೆಗಳಿಗೆ ಅಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸೈಬರ್ ಸೆಂಟರ್ ಮೇಲೆ ಸೂರ್ಯನಗರ ಪೊಲೀಸರು ರೇಡ್ ಮಾಡಿದ್ದಾರೆ.

ಪೊಲೀಸ್ ದಾಳಿ ವೇಳೆ ಹಲವಾರು ಆಧಾರ್ ಕಾರ್ಡ್ ಗಳು ಪತ್ತೆಯಾಗಿದ್ದು, ಆನೇಕಲ್ ಬಳಿಯ ಸೂರ್ಯಸಿಟಿ ಬಳಿ ಅಕ್ರಮ ಕಾರ್ಡ್ ತಯಾರಿ ದಂಧೆ ನಡೆಯುತ್ತಿತ್ತು. ನಕಲಿ ದಾಖಲೆಗಳನ್ನ ಬಳಸಿ ಆಧಾರ್ ಕಾರ್ಡ್ ಮಾಡ್ತಿದ್ದ ಆರೋಪಿ ಅರ್ನಾಬ್ ಮಂಡಲ್ ಕೇವಲ ಬಾಂಗ್ಲಾ ಪ್ರಜೆಗಳಿಗೆ ಮಾತ್ರ ಕಾರ್ಡ್ ರೆಡಿ ಮಾಡಿಕೊಡುತ್ತಿದ್ದ. ಅಷ್ಟೆ ಅಲ್ಲದೆ ಆರೋಪಿ 18 ಮನೆಗಳನ್ನ ಬಾಡಿಗೆ ಪಡೆದು ಅಗ್ರಿಮೆಂಟ್ ಮಾಡಿದ್ದ.

ಸ್ಥಳೀಯ ದಾಖಲೆಗಳನ್ನ ಪಡೆದು ಅನಂತರ ಆಧಾರ್ ಕಾರ್ಡ್ ಕೊಡ್ತಿದ್ದ. ಪೊಲೀಸರ ದಾಳಿ ವೇಳೆ ಸೈಬರ್ ಸೆಂಟರ್ ನಲ್ಲಿದ್ದ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ವಿರುದ್ಧ ಸೂರ್ಯಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಿಜಯನಗರ : ರಾಷ್ಟ್ರಿಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು – ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!

Leave a Comment

DG Ad

RELATED LATEST NEWS

Top Headlines

ಸೈಕ್ಲೋನ್​ ಎಫೆಕ್ಟ್ – ಚಾಮುಂಡಿ ಬೆಟ್ಟದಲ್ಲಿ ಉರುಳಿದ ಬೃಹತ್ ಬಂಡೆ.. ಬಸ್​ ಜಸ್ಟ್​ ಮಿಸ್​..!

ಮೈಸೂರು : ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ‘ಫೆಂಗಲ್’ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್

Live Cricket

Add Your Heading Text Here