Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಹೆಚ್ಚಾಯ್ತು ಗ್ಯಾಂಗ್​​ ವಾರ್ ​​​- ಎರಡು ರೌಡಿ ಗುಂಪುಗಳ ಮಧ್ಯೆ ನಡುರಸ್ತೆಯಲ್ಲೇ ಮಾರಾಮಾರಿ..!

ಬೆಂಗಳೂರಲ್ಲಿ ಹೆಚ್ಚಾಯ್ತು ಗ್ಯಾಂಗ್​​ ವಾರ್ ​​​- ಎರಡು ರೌಡಿ ಗುಂಪುಗಳ ಮಧ್ಯೆ ನಡುರಸ್ತೆಯಲ್ಲೇ ಮಾರಾಮಾರಿ..!

ಬೆಂಗಳೂರು : ಬೆಂಗಳೂರಲ್ಲಿ ದಿನೇ ದಿನೇ ರೌಡಿಗಳ ಗ್ಯಾಂಗ್​​ ವಾರ್ ಹೆಚ್ಚಾಗುತ್ತಿದೆ. ಇದೀಗ ಎರಡು ರೌಡಿಗಳ ಗುಂಪು ನಡುರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್​​​​ 22 ರಂದು ಸೈಕಲ್ ರವಿ ಟೀಂ ಹಾಗೂ ಕುಳ್ಳ ರಿಜ್ವಾನ್ ಹುಡುಗರ ಮಧ್ಯೆ ನಡೆದಿರುವ ವಾರ್​ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕುಳ್ಳ ರಿಜ್ವಾನ್ ಸಹಚರ ಗುಡ್ಡೆ ಭರತನ ಟೀಂ ಸೈಕಲ್ ರವಿ ಹುಡುಗರ ಮೇಲೆ ದಾಳಿ ಮಾಡಿದ್ದಾರೆ. ಸೈಕಲ್ ರವಿ ಗ್ಯಾಂಗ್​​​ ಗುಡ್ಡೆ ಭರತನಿಗೆ ಹೊಡೆಯಲು ರೌಂಡ್ಸ್ ಹೊಡೆಯುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಭರತನ ಹುಡುಗರು ಅಟ್ಯಾಕ್ ಮಾಡಿದ್ದಾರೆ.

6 ತಿಂಗಳ ಹಿಂದೆ ಸೈಕಲ್ ರವಿ ಟೀಂ, ಭರತನಿಗೆ ಹೊಡೆದಿದ್ದರು. ಮತ್ತೆ ಹೊಡೆಯುವುದಕ್ಕೆ ಸ್ಕೆಚ್ ಹಾಕಿದ್ದ ಸೈಕಲ್ ರವಿ ಗ್ಯಾಂಗ್ ರೌಂಡ್ಸ್ ಮಾಡ್ತಿದ್ರು. ಎಚ್ಚೆತ್ತ ಭರತನ ಹುಡುಗರು ಗೂಸ ಕೊಟ್ಟು ಕಳಿಸಿದ್ದಾರೆ. ಇನ್ನು ಸೆಪ್ಟೆಂಬರ್​​​​ 22 ರಂದು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಸಿಸಿಟಿವಿ ದೃಶ್ಯ ಹರಿದಾಡ್ತಿದ್ರೂ ಪೊಲೀಸರು ಕೇಸ್​​ ದಾಖಲಿಸಿಕೊಂಡಿಲ್ಲ. ಹೀಗಾಗಿ ಬೆಂಗಳೂರಲ್ಲಿ ರೌಡಿಗಳನ್ನು ಹೇಳೋರು.. ಕೇಳೋರು ಇಲ್ವಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಗೆ ಪ್ರತಿದಾಳಿ – ಇಸ್ರೇಲ್​ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ​ ಅಟ್ಯಾಕ್..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here