Download Our App

Follow us

Home » ರಾಜಕೀಯ » ಇಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದು ಪ್ರಚಾರ : ಸಂಯುಕ್ತಾ ಪಾಟೀಲ್​​ ಪರ ರೋಡ್ ಶೋ..!

ಇಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದು ಪ್ರಚಾರ : ಸಂಯುಕ್ತಾ ಪಾಟೀಲ್​​ ಪರ ರೋಡ್ ಶೋ..!

ಬಾಗಲಕೋಟೆ : ಉತ್ತರದ ಕ್ಷೇತ್ರಗಳಲ್ಲಿ ಸಿಎಂ ಸಿದ್ದು ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕೆಲ ಹೊತ್ತಿನಲ್ಲೇ ಬಾಗಲಕೋಟೆಯಲ್ಲಿ ಪ್ರಚಾರ ಪ್ರಾರಂಭವಾಗಲಿದ್ದು, ಸಿಎಂ ಸಿದ್ದು ಸಂಯುಕ್ತಾ ಪಾಟೀಲ್​​ ಪರ ರೋಡ್ ಶೋ ಮಾಡಲಿದ್ದಾರೆ. ಬನಹಟ್ಟಿ ನಗರದಿಂದ ರೋಡ್ ಶೋ ಶುರುವಾಗಲಿದ್ದು, ಪ್ರಜಾಧ್ವನಿ ಯಾತ್ರೆ ಮೂಲಕ ತೆರಳಿ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ.

ಬನಹಟ್ಟಿ SRA ಕಾಲೇಜು ಮೈದಾನದಲ್ಲಿ ಬೃಹತ್​ ಸಮಾವೇಶ ನಡೆಯಲಿದ್ದು, ಈ ವೇಳೆ ಸಚಿವ ಶಿವಾನಂದ್​ ಪಾಟೀಲ್​​, ಜಿಲ್ಲೆಯ ಶಾಸಕರು, ಮುಖಂಡರು ಸಾಥ್​​ ನೀಡಲಿದ್ದಾರೆ. ಇಂದು ಸಂಜೆವರೆಗೂ ಬಾಗಲಕೋಟೆಯಲ್ಲಿ ಸಂಯುಕ್ತಾ ಪರ ಸಿಎಂ ಪ್ರಚಾರ ನಡೆಸಲಿದ್ದಾರೆ.

ಬೆಳಗಾವಿಯಲ್ಲೂ ನಾಳೆ ಸಿಎಂ ಸಿದ್ದರಾಮಯ್ಯ ಪ್ರಚಾರ ಕಾವೇರಲಿದೆ. ನರೇಂದ್ರ ಮೋದಿ ಬರುವ ದಿನವೇ ಬೆಳಗಾವಿಗೆ ಸಿಎಂ ಸಿದ್ದು ಲಗ್ಗೆ ಇಡಲಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ, ಕಾಗವಾಡ,
ಉಗಾರ ಖುರ್ದ ಸೇರಿ ಹಲವು ಕಡೆ ಸಿಎಂ ಪ್ರಚಾರ ನಡೆಸಲಿದ್ದಾರೆ. ಭಾನುವಾರ ಬೆಳಗಾವಿಯಲ್ಲೇ ಸಿಎಂ ಪ್ರಚಾರ ಸಭೆ ನಡೆಸಿ, ಕಾಂಗ್ರೆಸ್​ ಅಭ್ಯರ್ಥಿ ಮೃಣಾಲ್​​​ ಹೆಬ್ಬಾಳ್ಕರ್​​ ಪರ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ : ಕರ್ನಾಟಕಕ್ಕೆ 3,454 ಕೋಟಿ ಬರ ಪರಿಹಾರ ನೀಡಿದ ಕೇಂದ್ರ ಸರ್ಕಾರ..!

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here