ಬಾಗಲಕೋಟೆ : ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರ ಎರಡು ಕೈಗಳು ಕಟ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಡೆದಿದೆ. ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು.
ಹೇರ್ ಡ್ರೈಯರ್ ಸ್ಫೋಟಕ್ಕೆ ಬಸಮ್ಮ ಯರನಾಳ ಅವರ ಮುಂಗೈ ಹಾಗೂ ಬೆರಳುಗಳು ಛಿದ್ರ ಛಿದ್ರವಾಗಿ ಬಿದ್ದಿದೆ. ಶಶಿಕಲಾ ಎನ್ನುವವರು ಹೇರ್ ಡ್ರೈಯರ್ ಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಅವರು ಇಲ್ಲದ ಕಾರಣ ಬಸಮ್ಮಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಕೊರಿಯರ್ ಓಪನ್ ಮಾಡಿ ಸ್ವೀಚ್ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಸ್ಫೋಟಗೊಂಡಿದೆ.
ವಿಚಿತ್ರ ಅಂದ್ರೆ ಶಶಿಕಲಾ ಹೇರ್ ಡ್ರೈಯರ್ಗೆ ಆರ್ಡರ್ ಮಾಡೇ ಇಲ್ಲ. ಆದ್ರೆ ಶಶಿಕಲಾ ಹೆಸರಲ್ಲಿ ಹೇರ್ ಡ್ರೈಯರ್ ಕೊರಿಯರ್ ಬಂದಿದೆ. ಆರ್ಡರ್ ಮಾಡಿದ್ಯಾರು..? ಹಣ ನೀಡಿದ್ಯಾರು..? ಹೇರ್ ಡ್ರೈರ್ ಕಳಿಸಿದ್ಯಾರು..? ಎಂಬ ಪ್ರಶ್ನೆಗೆ ಇಳಕಲ್ ನಗರ ಪೊಲೀಸರು ಈಗ ಅನುಮಾನಕ್ಕೆ ಉತ್ತರ ಹುಡುಕ್ತಿದ್ದಾರೆ. ವಿಶಾಖಪಟ್ಟಣದಲ್ಲಿ ತಯಾರಾಗಿದ್ದ ಹೇಯರ್ ಡ್ರೈಯರ್ ಬಾಗಲಕೋಟೆಯಿಂದ ಕೊರಿಯರ್ ಬಂದಿದೆ ಅನ್ನೋ ಮಾಹಿತಿ ಪತ್ತೆಯಾಗಿದೆ.
ಇದನ್ನೂ ಓದಿ : ಅಭಿಮನ್ಯು ಕಾಶೀನಾಥ್ ನಟನೆಯ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟೀಸರ್ ರಿಲೀಸ್..!