ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ– ಭುವನ್ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಹರ್ಷಿಕಾಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ “ಬೇಬಿ ಶವರ್” ಮಾಡಿದ್ದಾರೆ.
ಆಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ರಘು ಮುಖರ್ಜಿ, ನಾಯಕಿಯರಾದ ಶರಣ್ಯ, ನಿಖಿತಾ, ಅಮೂಲ್ಯ ಜಗದೀಶ್, ದಿಶಾ ಹಾಗೂ ಡಾ. ಪ್ರೀತಿ ಸುಧಾಕರ್, ಶೀಲಾ ಯೋಗೀಶ್ವರ್ ಇನ್ನೂ ಅನೇಕರು ಬೇಬಿ ಶವರ್ನಲ್ಲಿ ಭಾಗಿಯಗಿದ್ದರು. ಅಮ್ಮನಾಗುವ ನಿರೀಕ್ಷೆಯಲ್ಲಿರುವ ಹರ್ಷಿಕಾಗೆ ಮುತ್ತುಗಳ ಹಾಗೂ ಉಡುಗೊರೆಗಳ ಸುರಿ ಮಳೆಯೇ ಹರಿದು ಬಂದಿದೆ.
ಬೇಬಿ ಶವರ್ನಲ್ಲಿ ಹಿರಿಯರು ಕಿರಿಯರು ಎಲ್ಲಾರು ಒಟ್ಟಿಗೆ ಕುಣಿದು, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ ಹರ್ಷಿಕಾಗಾಗಿ ಹಾಡಿ ಸರ್ ಪ್ರೈಸ್ ನೀಡಿದ್ದಾರೆ. ಬೇಬಿ ಥೀಮ್ ಕೇಕ್, ಡೆಕೊರೇಷನ್ನ ಥೀಮ್ ಬೇಬಿ ಶವರ್ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಈ ಎಲ್ಲಾ ಕಾರ್ಯಗಳನ್ನು ಶಿಲ್ಪಾ ಗಣೇಶ್ ಅವರು ಖುದ್ದಾಗಿ ನಿಂತು ಈ ಯುವ ಜೋಡಿ ಗೋಸ್ಕರ ಮಾಡಿದ್ದಾರೆ. ಹರ್ಷಿಕಾ ಮತ್ತು ಭುವನ್ ಅಕ್ಟೋಬರ್ನಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ : ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಕಲಾ ರಸಿಕರು ಫಿದಾ – ಮೂರನೇ ವಾರದಲ್ಲೂ ಮುಂದುವರಿದಿದೆ ಗೆಲುವಿನ ಓಟ..!