ಕನ್ನಡ ಚಿತ್ರರಂಗದಲ್ಲಿ ‘ಚೌಕಾಬಾರ’ ಎಂಬ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ವಿಕ್ರಮ್ ಸೂರಿ ನಿರ್ದೇಶಿಸಿದ್ದು, ನವಿ ನಿರ್ಮಿತಿ’ ಸಂಸ್ಥೆ ವತಿಯಿಂದ ನಮಿತ ರಾವ್ ನಿರ್ಮಿಸಿದ್ದಾರೆ. ಇದೀಗ ‘ಚೌಕಬಾರ’ದ ಕಾದಂಬರಿ ಆಧಾರಿತ ಚಿತ್ರದ ಹಾಡು ‘ಯಾವ ಚುಂಬಕ’ (ರಚನೆ- ಬಿ ಆರ್ ಲಕ್ಷ್ಮಣ ರಾವ್) ಗೀತ ಸಾಹಿತ್ಯಕ್ಕೆ ಈ ಬಾರಿ 69ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ದೊರೆತಿದೆ.
69ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ದೊರೆತಿದೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನಮಿತ ರಾವ್ ಹಾಗೂ ವಿಕ್ರಂ ಸೂರಿ ದಂಪತಿಗಳು, ತಮ್ಮ ಚುಚ್ಚಲ ಚಿತ್ರಕ್ಕೆ ಈ ಗೌರವ ಲಭಿಸಿದ್ದಕ್ಕಾಗಿ ಹಾಗೂ ಇದರಿಂದ ತಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಯಿತು ಎಂದು ತಿಳಿಸಿದ್ದಾರೆ.
ಇನ್ನು ಸಂತಸ ವ್ಯಕ್ತಪಡಿಸಿದ ಕವಿ ಬಿ ಆರ್ ಲಕ್ಷ್ಮಣರಾವ್ ಅವರು, ಈ ಹಿಂದೆ ತಮ್ಮ ಹಲವಾರು ಭಾವಗೀತೆಗಳನ್ನು ಅನೇಕ ಚಿತ್ರಗಳಲ್ಲಿ ಬಳಸಿಕೊಂಡಿದ್ದು, ಚಲನಚಿತ್ರಕ್ಕಾಗಿ ಗೀತೆಗಳನ್ನು ಸಹ ರಚಿಸಿದ್ದೇನೆ. ಆದರೆ ನನ್ನ ವೃತ್ತಿ ಜೀವನದಲ್ಲಿ ಈಗ “ಚೌಕಬಾರ” ಚಿತ್ರದ ಮುಖೇನ ‘ಫಿಲಂ ಫೇರ್‘ ಪ್ರಶಸ್ತಿ ಲಭಿಸಿದ್ದು ನನಗೆ ಸಂತೋಷ ತಂದಿದೆ ಎಂದು ಚಿತ್ರತಂಡಕ್ಕೆ, ಫಿಲಂ ಫೇರ್ ಸಮಿತಿಗೆ ಹಾಗೂ ಸಾಹಿತ್ಯ ರಸಿಕರಿಗೆ ಧನ್ಯವಾದಗಳು ತಿಳಿಸಿದರು.
ಈ ಚಿತ್ರದಲ್ಲಿ ನಟಿ ನಮಿತಾ ರಾವ್ಗೆ ವಿಹಾನ್ ಪ್ರಭಂಜನ್ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಸುಜಯ್ ಹೆಗಡೆ, ಕಾವ್ಯಾ ರಮೇಶ್, ಕೀರ್ತಿ ಭಾನು, ಸಂಜಯ್ ಸೂರಿ, ಮಧು ಹೆಗಡೆ, ಪ್ರಥಮ ಪ್ರಸಾದ್, ಸೀತಾ ಕೋಟೆ, ಶಶಿಧರ್ ಕೋಟೆ ಮುಂತಾದವರು ‘ಚೌಕಾಬಾರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ : ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲು..!