ಬೆಂಗಳೂರು : ಸಿಗರೇಟ್ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲ್ಲೆ ವಿಡಿಯೋ ವೈರಲ್ ಆಗ್ತಿದ್ದಂತೆ ಯುವಕರ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದ್ದು, ಹಲ್ಲೆ ಮಾಡಿದ ಮೂವರು ಯುವಕರನ್ನು HAL ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಮಾಡಿದ್ದ ಆದರ್ಶ್ ಆದೇಶ್, ಚಂದ್ರ ಶೇಖರ್, ಪವನ್ ಅರೆಸ್ಟ್ ಆಗಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. ವೆಸ್ಟ್ ಬೆಂಗಾಲ್ ಮೂಲದ ರಾಜೇಶ್ ದಾಸ್ ಮೇಲೆ ಯುವಕರು ಹಲ್ಲೆ ಮಾಡಿದ್ದರು.
ಆದರ್ಶ್ ಆದೇಶ್ ಹಾಗೂ ಹಲ್ಲೆಗೊಳಗಾದ ರಾಜೇಶ್ ಇಬ್ಬರು ಸ್ನೇಹಿತರಾಗಿದ್ದರು, ಹಲ್ಲೆ ಮಾಡುವ 3 ದಿನದ ಹಿಂದೆ ಸಿಗರೇಟ್ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ನಡೆದಿತ್ತು. ಈ ವಿಚಾರವಾಗಿ ಯುವಕರು ದೊಣ್ಣೆ, ಹೆಲ್ಮೆಟ್, ಕೈನಿಂದ ರಕ್ತ ಬರುವಂತೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಐವರು ಆರೋಪಿಗಳು ದೊಡ್ಡನಕುಂದಿಯ ನಿವಾಸಿಗಳು.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ – ಯಾರಿಗೆ ಸಿಗಲಿದೆ ಬಿಡುಗಡೆ ಭಾಗ್ಯ?
Post Views: 354