Download Our App

Follow us

Home » ಅಪರಾಧ » ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ ಹಲಗೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆದರೆ ಅಟ್ರಾಸಿಟಿ ಕೇಸ್​​ ಇದ್ರೂ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ ಇನ್ನೂ ಅರೆಸ್ಟ್ ಆಗಿಲ್ಲ.

ಇದೀಗ ಬಿಟಿವಿ ಉಡಾಳ್ ಅಧಿಕಾರಿಯ ಕರ್ಮಕಾಂಡದ ಸುದ್ದಿಯನ್ನು ಬಯಲು ಮಾಡಿದೆ. ಮಳವಳ್ಳಿಯ ಅಗಸನಪುರದ ನಿವಾಸಿ ಆಗಿರೋ ಸೋಮಣ್ಣ ಅನ್ನೋರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು. ಭೂ ವಿವಾದಕ್ಕೆ ತೊಂದರೆ ಕೊಡೋಕೆ ಮಂಜೇಶ್‌ & ಗ್ಯಾಂಗ್‌ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಜಾತಿ ನಿಂದನೆ ಮಾಡಿ ಮನ ಬಂದಂತೆ ಥಳಿಸಿದ್ದರು.

ಈ ಸಂಬಂಧ ಜೂನ್​ 25ರಂದು ಹಲಗೂರು ಸ್ಟೇಷನ್​​ನಲ್ಲಿ ಆನೇಕಲ್​ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ ವಿರುದ್ದ ದಾಖಲಾಗಿತ್ತು. ಇದೀಗ ಕಳೆದ 25 ದಿನಗಳಿಂದ ತಲೆಮರೆಸಿಕೊಂಡಿರೋ ಅಧಿಕಾರಿ ಅಮಾಯಕರ ಮೇಲೆ ಮಂಜೇಶ್ ದೌರ್ಜನ್ಯ ಮಾಡಿದ್ರೂ, ಅಟ್ರಾಸಿಟಿ ಕೇಸ್ ಕೂಡ ಇದೆ. ಆದರೆ ಆನೇಕಲ್​ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​ರನ್ನು ನಗರಾಭಿವೃದ್ಧಿ ಇಲಾಖೆ ಸಸ್ಪೆಂಡ್‌ ಮಾಡಿಲ್ಲ. ಪೊಲೀಸರು ಅರೆಸ್ಟ್‌ ಮಾಡಿಲ್ಲ. ಎಲ್ಲಾ ಗೊತ್ತಿದ್ರೂ ನಗರಾಭಿವೃದ್ಧಿ ಇಲಾಖೆ ಸುಮ್ಮನೆ ಇರೋದ್ಯಾಕೆ. FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 

ಇದನ್ನೂ ಓದಿ : ಮಳೆಹಾನಿ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ..!

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here