ಬೆಳಗಾವಿ : ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿದೆ. ಅಧಿವೇಶನದ ನಾಲ್ಕನೇ ದಿನ ಬಹುತೇಕ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಂಬಂಧವೇ ಚರ್ಚೆ ನಡೆದಿತ್ತು. ಇದೀಗ ಐದನೇ ದಿನದ ಕಲಾಪದಲ್ಲಿ ವಕ್ಫ್ ಚರ್ಚೆಗೆ ಬಿಜೆಪಿ ಸದಸ್ಯರ ಬಿಗಿಪಟ್ಟು ಹಿಡಿದ್ದಾರೆ.
ವಿಧಾನಸಭೆಯಲ್ಲಿ ಕೈ-ಕಮಲ ಕೋಲಾಹಲ ಜೋರಾಗಿದ್ದು, ವಕ್ಫ್ ಚರ್ಚೆಗೆ ಬಿಜೆಪಿ ಸದಸ್ಯರು ಬಿಗಿಪಟ್ಟು ಹಿಡಿದರೇ , ಮುನಿ ಹನಿ ಪ್ರಕರಣ ಪ್ರಸ್ತಾಪಕ್ಕೆ ಕಾಂಗ್ರೆಸ್ ಹಠ ಹಿಡಿದಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ವಕ್ಫ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೂ ಮುನ್ನ ಮುನಿರತ್ನ ಜಾತಿನಿಂದನೆ ಬಗ್ಗೆ ಚರ್ಚೆಗೆ ಪಟ್ಟು ಹಿಡಿದ ಮಳವಳ್ಳಿ ಶಾಸಕ ಪಿ.ನರೇಂದ್ರಸ್ವಾಮಿ ಅವರು, ಮುನಿರತ್ನ ವಿಚಾರ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಈ ವೇಳೆ ಗದ್ದಲ, ಕೋಲಾಹಲದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನಮಗೆ ಮಾತ್ನಾಡಲು ಅವಕಾಶ ಕೊಡ್ತಿಲ್ಲ ಎಂದು ಆಕ್ರೋಶ ಹೊರಹಾಕಿದ ಬಿಜೆಪಿ ಸದಸ್ಯರು ಅಶೋಕ್ ನೇತೃತ್ವದಲ್ಲಿ ಸದನದಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ : RBI ಕಚೇರಿ ಸ್ಫೋಟಿಸುವುದಾಗಿ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ – ತಿಂಗಳಲ್ಲಿ ಎರಡನೇ ಘಟನೆ!