Download Our App

Follow us

Home » ಅಪರಾಧ » ಅಸ್ಸಾಂ NIA ಅಧಿಕಾರಿಗಳಿಂದ ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್​..!

ಅಸ್ಸಾಂ NIA ಅಧಿಕಾರಿಗಳಿಂದ ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್​..!

ಬೆಂಗಳೂರು : ಅಸ್ಸಾಂ NIA ಅಧಿಕಾರಿಗಳು ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರನನ್ನು ಅರೆಸ್ಟ್​​ ಮಾಡಿದ್ದಾರೆ. ಗಿರಿಶ್ ಬೋರಾ @ ಗೌತಮ್ ಶಂಕಿತ ಉಗ್ರನನ್ನು ನಿನ್ನೆ NIA ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಶಂಕಿತ ಉಗ್ರ ಗೌತಮ್, ಗುವಾಹತಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದನು. ಆಗಸ್ಟ್​ನಲ್ಲಿ ಗುವಾಹತಿಯಲ್ಲಿ 5 LED ಬಾಂಬ್ ಇಟ್ಟಿದ್ದ ಶಂಕಿತ,  ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದನು.

ಇನ್ನು ಬೆಂಗಳೂರಿಗೆ ಬಂದಿದ್ದ ಬಂಧಿತ ಶಂಕಿತ ಉಗ್ರ, ಗೌತಮ್ ಎನ್ನುವ ಹೆಸರಲ್ಲಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದನು. ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿ ಅಸ್ಸಾಂ NIA ಅಧಿಕಾರಿಗಳು ಶಂಕಿತ ಉಗ್ರ ಗೌತಮ್​​ನನ್ನು ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಅರೆಸ್ಟ್​​ ಮಾಡಿದ್ದಾರೆ.

ಸದ್ಯ ಶಂಕಿತನನ್ನ ಬಂಧಿಸಿರೋ ಅಸ್ಸಾಂ ಎನ್ಐಎ ಟೀಂ, ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳು ವಶಕ್ಕೆ ಪಡೆದುಕೊಂಡಿವೆ. NIA ಬಂಧಿತ ಶಂಕಿತ ಉಗ್ರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಸ್ಸಾಂಗೆ ಕರೆದೊಯ್ದಿದೆ.

ಇದನ್ನೂ ಓದಿ : ಲೆಬನಾನ್ : ಸಿರಿಯಾ ಕಾರ್ಮಿಕರಿದ್ದ ಕಟ್ಟಡದ ಮೇಲೆ ಇಸ್ರೇಲ್ ದಾಳಿ – 23 ಮಂದಿ ಸಾವು..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here