ಬೆಂಗಳೂರು : ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಥಾನವನ್ನು ಪತ್ನಿ ಅಶ್ವಿನಿ ಅವರು ತುಂಬುತ್ತಿದ್ದಾರೆ. ಈ ಸ್ಥಾನವನ್ನು ಅಭಿಮಾನಿಗಳು ಕೂಡ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಕೊಟ್ಟಿದ್ದಾರೆ. ಇದುವರೆಗೂ ಯಾರೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡದ ಅಶ್ವಿನಿ ಅವರ ಡೀಪ್‌ಫೇಕ್ ವಿಡಿಯೋ ಒಂದನ್ನು ಕಿಡಿಗೇಡಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಪೋಸ್ಟ್ ಹಾಕಿರುವ ಕಿಡಿಗೇಡಿ ಮೇಲೆ ಇದೀಗ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ‘ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ. 29ನೇ ಅಕ್ಟೋಬರ್ 2024ರಂದು ನಾನು ವಿವಾಹವಾಗಲಿದ್ದೇನೆ, ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಂಮಂತ್ರಣ. ಸ್ಥಳ: ಶ್ರೀಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು’ ಎಂದು ಬರೆದುಕೊಂಡಿದ್ದಾನೆ.
ಟ್ವಿಟರ್‌ನಲ್ಲಿ ಕೇವಲ 100 ಫಾಲೋವರ್ಸ್ ಅನ್ನು ಹೊಂದಿರುವ ಯೋಗೇಂದ್ರ ಎಂಬ ಹೆಸರಿನ ಈ ವ್ಯಕ್ತಿಯೂ ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದಾನೆ. ತನ್ನ ಟ್ವಿಟರ್ ಪೋಸ್ಟ್‌ಗಳಲ್ಲಿ ಪ್ರತಿಯೊಬ್ಬರ ಕಾಲೆಳೆಯುವ ವಿಚಾರಗಳನ್ನು ಹಾಕಿಕೊಂಡಿದ್ದಾನೆ. ಇತ್ತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹರಿದಾಡುತ್ತಿರುವುದು ಇದೇನು ಮೊದಲಲ್ಲ. ಆರ್‌ಸಿಬಿ ತಂಡ ಪದೇ ಪದೇ ಮ್ಯಾಚ್ ಸೋಲುತ್ತಿರುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಜರ್ಸಿ ಲಾಂಚ್ ಮಾಡಿದ್ದೇ ಕಾರಣ ಎಂದು ಆಗಲೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ವಿಚಾರ ಅಶ್ವಿನಿ ಗಮನಕ್ಕೆ ಬಂದಿತ್ತು. ‘ಏನು ಮಾಡಲು ಆಗಲ್ಲ ಎದುರಿಸಬೇಕು’ ಎಂದು ಹೇಳಿ ಸುಮ್ಮನಾದರು.
ಇದನ್ನೂ ಓದಿ : ಮುಡಾ ಕೇಸ್ನಲ್ಲಿ ಸಿಎಂ ಸಿದ್ದುಗೆ ಇಂದು ನಿರ್ಣಾಯಕ ದಿನ – ರದ್ದಾಗುತ್ತಾ ಗವರ್ನರ್ ನೀಡಿರೊ ಪ್ರಾಸಿಕ್ಯೂಷನ್ ಅನುಮತಿ?