ಮೈಸೂರು : ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರತಂಡ ಮೈಸೂರಿನ ಅರ್ಜುನ ಅವಧೂತ ಗುರೂಜಿಯವರ ನಿವಾಸಕ್ಕೆ ಭೇಟಿ ನೀಡಿದೆ. ಅವಧೂತ ಶ್ರೀ ಅರ್ಜುನ್ ಗುರೂಜಿ ಅವರು ಸಿನಿಮಾ ಸಂಪೂರ್ಣ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಗುರೂಜಿ ಚಿತ್ರ ಯಶಸ್ವಿಯಾಗಲೇಂದು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಟನಿಗೆ ಅವಧೂತರು ಆಶೀರ್ವಾದ ಮಾಡಿ, ಅಪ್ಪ ಕಾಶೀನಾಥ್ರವರ ಹೆಸರು ಅಜರಾಮರವಾಗಲಿ, ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳು ಉನ್ನತ ಮಟ್ಟದಲ್ಲಿ ಏರಬೇಕು. ಅಭಿಮನ್ಯು ಕಾಶೀನಾಥ್ರವರ ತಂಡ ಈಗಿನ ಯುವಕರಿಗೆ ಸಂದೇಶ ನೀಡಲೆಂದು ಗುರೂಜಿ ಹರಸಿದರು. ನಟ ಅಭಿಮನ್ಯು ಕಾಶೀನಾಥ್, ನಟಿ ಸ್ಪೂರ್ತಿ, ನಿರ್ದೇಶಕ ಕಿರಣ್ ಸೂರ್ಯ ಗುರೂಜಿ ನಿವಾಸಕ್ಕೆ ಆಗಮಿಸಿದ್ದರು.
ಸುದರ್ಶನ್ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದು, ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ ಜೋಡಿಯಾಗಿ ನಟಿಸಿದ್ದಾರೆ. ವಿಜಯಶ್ರೀ ಕಲ್ಬುರ್ಗಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲರಾಜ್ವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್, ರಿನಿ ಮುಂತಾದವರ ತಾರಾಗಣವಿದೆ. ಸತ್ಯ ರಾಮ್ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ, ಪ್ರಮೋದ್ ಮರವಂತೆ, ಕಿರಣ್ ಎಸ್ ಸೂರ್ಯ ಸಾಹಿತ್ಯ, ಜೀವನ್ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಪ್ರಣವ್ ರಾವ್ ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ.
ಇದನ್ನೂ ಓದಿ : ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗ್ರತೆ ವಹಿಸುವಂತೆ ಪ್ರಧಾನಿ ಮೋದಿ ವಾರ್ನಿಂಗ್..!