ಬೆಂಗಳೂರು : ನೆಲಮಂಗಲದ ಡಾಬಾ ಬಳಿ ವಾಹನ ನಿಲ್ಲಿಸುವ ವಿಚಾರ ಗಲಾಟೆಗೆ ತಿರುಗಿ ಸಾವಿನಲ್ಲಿ ಅಂತ್ಯವಾಗಿದೆ. ಜ್ಯಾಕ್ ರಾಡ್ನಿಂದ ವ್ಯಕ್ತಿಯ ತಲೆಗೆ ಹಲ್ಲೆ ಮಾಡಿದ್ದು, ಗಾಯಾಳಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಮಲ್ಲರಬಾಣವಾಡಿ ಕ್ರಾಸ್ ಸಮೀಪದ ಗ್ರೀನ್ ಪಾರ್ಕ್ ಡಾಬಾ ಬಳಿ ಗಲಾಟೆ ನಡೆದಿದ್ದು, 29 ವರ್ಷದ ಪ್ರದೀಪ್ ಸಾವನ್ನಪ್ಪಿರುವ ದುರ್ದೈವಿ. ಬೆಂಗಳೂರು ಉತ್ತರ ತಾಲ್ಲೂಕಿನ ಶ್ಯಾನಬೋಗನಹಳ್ಳಿ ಮಹೇಶ್ ಎಂಬಾತ ಪ್ರದೀಪ್ ತಲೆಗೆ ಹಲ್ಲೆ ನಡೆಸಿದ್ದ.
ಮಹೇಶನ ಜೊತೆಗಿದ್ದ ಬೋರಲಿಂಗ ಮತ್ತು ಸುನೀಲ್ ಇಬ್ಬರನ್ನೂ ಬಂಧಿಸಿ ವಿಚಾರಣೆ ಮಾಡಲಾಗ್ತಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೋಮಲ್ ನಟನೆಯ ‘ಯಲಾಕುನ್ನಿ’ ಸಿನಿಮಾದ ಚಿತ್ರೀಕರಣ ಮುಕ್ತಾಯ..!
Post Views: 1,618