ಬೆಂಗಳೂರು : ಕಂದಾಯ ಇಲಾಖೆಯ 17 ತಹಶೀಲ್ದಾರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಚನ್ನಪಟ್ಟಣ ತಾಲೂಕಿನ ತಹಶೀಲ್ದಾರ್ ಗ್ರೇಡ್ – 1 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ಟಿ.ಎನ್ ಅವರನ್ನು ಕೆ.ಆರ್.ಪುರಂ ವಿಶೇಷ ತಹಶೀಲ್ದಾರ್ ಆಗಿ ವರ್ಗಾ ಯಿಸಲಾಗಿದೆ. ಬಾದಾಮಿ ತಾಲೂಕಿನ ತಹಶೀಲ್ದಾರ್ ಗ್ರೇಡ್ – 1 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧುರಾಜ್ರನ್ನು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಗ್ರೇಡ್ – 1 ವೃಂದಕ್ಕೆ, ಮಾಲೂರು ತಹಶೀಲ್ದಾರ್ ಗ್ರೇಡ್ – 2 ಆಗಿದ್ದ ಎಸ್. ಹರಿಪ್ರಸಾದ್ರನ್ನು ಕೋಲಾರ ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರ (OA) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇನ್ನು ಬೆಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಆಯುಕ್ತಾಲಯದಲ್ಲಿ ತಹಶೀಲ್ದಾರ್, ಸಹಾಯಕ ನಿರ್ದೇಶಕರಾಗಿದ್ದ ವರ್ಷ ಅವರನ್ನು ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಹುದ್ದೆಗೆ ಹಾಗೂ ಮಡಿಕೇರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿದ್ದ ಎಚ್.ಪಿ ರವಿಪ್ರಸಾರ್ ಅನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.
ವರ್ಗಾವಣೆಗೊಂಡ ತಹಶೀಲ್ದಾರ್ಗಳ ಪಟ್ಟಿ ಇಲ್ಲಿದೆ :
ಇದನ್ನೂ ಓದಿ : ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್ ಸೇರಿ 7 ಮಂದಿ ಸಾವು!
