ಅಹಮದಾಬಾದ್ : ಗುಜರಾತ್ನ ಅಹ್ಮದಾಬಾದ್ನಲ್ಲಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಪತನಗೊಂಡು ಪ್ರಯಾಣಿಕರು ಸೇರಿದಂತೆ ಮೃತಪಟ್ಟ 274 ಮಂದಿಯ ಕುಟುಂಬಕ್ಕೆ ಏರ್ ಇಂಡಿಯಾವು 25 ಲಕ್ಷ ರೂ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ.
ಈಗಾಗಲೇ ಟಾಟಾ ಗ್ರೂಪ್ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಏರ್ ಇಂಡಿಯಾ ಸಂಸ್ಥೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ.
ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್ ಇಂಡಿಯಾ ಒಟ್ಟಾಗಿ ನಿಲ್ಲುತ್ತದೆ. ಊಹಿಸಲೂ ಸಾಧ್ಯವಾಗದ ಈ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸಂಸ್ಥೆ ಒದಗಿಸಲಿದೆ. ಹೀಗಾಗಿ ಸಂತ್ರಸ್ತ ಕುಟುಂಬಗಳು ತಕ್ಷಣದ ಆರ್ಥಿಕತೆಗಳನ್ನು ಪೂರೈಸಲು ತಲಾ 25 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ : ಲೋಕಾ ಹೆಸರಲ್ಲಿ ಕೋಟಿ ಕೋಟಿ ವಸೂಲು – ಆರೋಪಿ ನಿಂಗಪ್ಪನೊಂದಿಗೆ 3 ಪ್ರಭಾವಿ ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?
