ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’ ಸಿನಿಮಾ ಫ್ಲಾಪ್ – ಥಿಯೇಟರ್​ನಿಂದ ಎತ್ತಗಂಡಿ.. ಪ್ರೊಡ್ಯೂಸರ್​​ಗೆ ಭಾರೀ ಲಾಸ್!

ಬೆಂಗಳೂರು : ಸ್ಯಾಂಡಲ್‌ವುಡ್​​ನಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿದ್ದ​ ‘ಮಾದೇವ’ ಚಿತ್ರಕ್ಕೆ ದೊಡ್ಡ ಸೋಲಾಗಿದೆ. ಜೂನ್ 6ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಿದ್ದ ನಟ ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಸಿನಿಮಾಗೆ ಥಿಯೇಟರ್​ನಿಂದ ಗೇಟ್​​ಪಾಸ್​ ಸಿಕ್ಕಿದೆ.

ಹೌದು.. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದ್ದ ‘ಮಾದೇವ’ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗುವಲ್ಲಿ ವಿಫಲವಾಗಿದೆ. ಆ ಮೂಲಕ ಸಿನಿಮಾ ರಿಲೀಸ್ ಆಗಿರೋ ಕೆಲವೇ ದಿನಗಳಲ್ಲಿ ಥಿಯೇಟರ್​ನಿಂದ ಗೇಟ್ ಪಾಸ್ ಪಡೆದುಕೊಂಡಿದ್ದು, ರಾಜ್ಯದ ಎಲ್ಲಾ ಥಿಯೇಟರ್​ಗಳಿಂದ ಸಿನಿಮಾವನ್ನು ತೆಗೆದು ಹಾಕಲಾಗಿದೆ.  ಬಾಕ್ಸ್​​ ಆಫೀಸ್​ನಲ್ಲಿ ಒಂದೇ ಒಂದು ರೂಪಾಯಿ ಕಮಾಯಿ ಮಾಡದ ‘ಮಾದೇವ’ ಸಿನಿಮಾ, ನಿರ್ಮಾಪಕ ಆರ್ ಕೇಶವ್​ಗೆ ಭಾರೀ ನಷ್ಟ ತಂದೊಡ್ಡಿದೆ.

ಸ್ಯಾಟಲೈಟ್ ರೈಟ್ಸ್ ಇಲ್ಲ.. ಓಟಿಟಿ ರೈಟ್ಸ್ ಸಿಕ್ಕಿಲ್ಲ.. ‘ಮಾದೇವ’ನಿಗೆ ಝೀರೋ ಬ್ಯುಸಿನೆಸ್.. : 70-80ರ ದಶಕದ ಮಾದರಿಯಲ್ಲಿರೋ ಮಾದೇವ ಸಿನಿಮಾದ ಕಥೆ ಸೂಪರ್.. ಕಲಾವಿದ ಆ್ಯಕ್ಟಿಂಗ್ ಅದ್ಭುತ.. ಆದ್ರೆ, ಸ್ಟೋರಿ ಪ್ರಸಂಟೇಶನ್ ಸಿನಿಮಾದ ‘ಫ್ಲಾಪ್’ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ನಿರ್ಮಾಪಕ ಆರ್ ಕೇಶವ್
ನಿರ್ಮಾಪಕ ಆರ್ ಕೇಶವ್

ಹಳ್ಳಿ ಸೊಗಡಿನ ಜನಪದ ಶೈಲಿಯ ಕಥೆ ಹೊದಿದ್ದ ‘ಮಾದೇವ’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್​ಗೆ ಜೋಡಿಯಾಗಿ ಸೋನಾಲ್ ಮಾಂಥೆರೋ ನಟಿಸಿದ್ದರು. ಚಿತ್ರದಲ್ಲಿ ಅಬ್ಬಲಗೆರೆ ಕೇಂದ್ರ ಕಾರಾಗೃಹದಲ್ಲಿ ಅಪರಾಧಿಗಳನ್ನು ನೇಣುಗಂಬಕ್ಕೇರಿಸುವಾತ, ಭಾವನೆಗಳಿಲ್ಲದ, ಯಾರೊಂದಿಗೂ ಮಾತನಾಡದ, ಮೃಗದ ಲಕ್ಷಣಗಳುಳ್ಳ ಜೀವಂತ ಶವದಂತೆ ಇರುವಾತನ ಬದುಕಿನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯಿಸಿದ್ದರು.

‘ಮಾದೇವ’ ಕೆಲಸ ಮಾಡುವ ಕಾರಾಗೃಹದಲ್ಲೇ ‘ಪಾರ್ವತಿ’ ಪಾತ್ರದಲ್ಲಿ ಸೋನಲ್‌ ಬಣ್ಣ ಹಚ್ಚಿದ್ದರು. ಇನ್ನು ಸಿನಿಮಾದ ಕ್ಲೈಮ್ಯಾಕ್ಸ್ ಫೈಟ್​ನಲ್ಲಿ ವಿನೋದ್ ಪ್ರಭಾಕರ್ ರಾಕ್ಷಸನ ಅಬ್ಬರ ನೋಡುಗರ ಮೈ ಜುಮ್ ಅನ್ನಿಸುತ್ತದೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಶೃತಿ, ಶ್ರೀನಗರ ಕಿಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿದ್ದಾರೆ.

ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್. ಕೇಶವ ನಿರ್ಮಿಸಿರೋ ಈ ಸಿನಿಮಾವನ್ನು ನವೀನ್ ರೆಡ್ಡಿ ಅವರು ನಿರ್ದೇಶಿಸಿದ್ದಾರೆ. ಆದ್ರೆ ಇದೀಗ ಸಿನಿಮಾಗೆ ದೊಡ್ಡ ಹಿನ್ನಡೆಯಾಗಿದ್ದು, ಬಾಕ್ಸ್​​ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ಈ ಮೂಲಕ ನಿಮಾರ್ಪಕ ಆರ್ ಕೇಶವ್​ಗೆ ಭಾರೀ ನಷ್ಟವಾಗಿದೆ.

ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’ ಆರಂಭ!

 

Btv Kannada
Author: Btv Kannada

Read More