ಪರಪ್ಪನ ಅಗ್ರಹಾರ ಜೈಲಿಗೆ ಮೊಬೈಲ್ ಸರಬರಾಜು ಮಾಡಲು ಯತ್ನ – ಸೈಕಾಲಜಿಸ್ಟ್ ವಿರುದ್ಧ FIR!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿಗೆ ಮೊಬೈಲ್ ಸರಬರಾಜು ಮಾಡಲು ಯತ್ನಿಸಿದ್ದ ಸೈಕಾಲಜಿಸ್ಟ್ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಕಾರಾಗೃಹ ಆಸ್ಪತ್ರೆಯ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನವ್ಯಶ್ರೀ ಎಂಬವರ ಬಳಿ Redmi ಮೊಬೈಲ್ ಪತ್ತೆಯಾಗಿದೆ.

KSISF ಮಹಿಳಾ ಕಾನ್ಸ್ಟೇಬಲ್ ಪರಿಶೀಲನೆ ವೇಳೆ ಮೊಬೈಲ್ ಪತ್ತೆಯಾಗಿದ್ದು, ಜೈಲ್ಲಿನ ಒಳಗೆ ಇರುವ ಅಪರಾಧಿಗಳಿಗೆ ಮೊಬೈಲ್ ಸರಬರಾಜು ಮಾಡಲು ಸೈಕಾಲಜಿಸ್ಟ್ ನವ್ಯಶ್ರೀ  ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಅಕ್ರಮವಾಗಿ ಮೊಬೈಲ್ ಸಾಗಾಟ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೈಕಾಲಜಿಸ್ಟ್ ನವ್ಯಶ್ರೀ ವಿರುದ್ದ FIR ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಕರ್ನಾಟಕಕ್ಕೆ 1.15 ಲಕ್ಷ ಕೋಟಿ ಕೊಡಿ – ಕೇಂದ್ರ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ!

Btv Kannada
Author: Btv Kannada

Read More