ಅಹಮದಾಬಾದ್ : ಪತನಗೊಂಡ ಏರ್ ಇಂಡಿಯಾ ವಿಮಾನ AI-171ರ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದ್ದು, ಇದು ವಿಮಾನ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಕಂಡುಕೊಳ್ಳಲು ನೆರವಾಗುತ್ತದೆ.
ಗುಜರಾತ್ನಲ್ಲಿ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 12ರಂದು ಹೊರಟಿದ್ದ ಏರ್ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿತ್ತು. ಇದೀಗ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ದುರಂತ ನಡೆದ ಸ್ಥಳ, ಅಂದ್ರೆ ವೈದ್ಯಕೀಯ ಕಾಲೇಜು ಹಾಸ್ಟೆಲ್ನ ಕಟ್ಟಡದ ಮೇಲೆ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು, ಡಿಜಿಸಿಎ ಅದನ್ನು ವಶಕ್ಕೆ ಪಡೆದುಕೊಂಡಿದೆ.
ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಬ್ಲ್ಯಾಕ್‌ಬಾಕ್ಸ್ ಹೆಚ್ಚು ಸಹಕಾರಿ ಆಗಲಿದೆ. ಪತ್ತೆಯಾದ ಬ್ಲ್ಯಾಕ್‌ಬಾಕ್ಸ್‌ನಿಂದ ವಿಮಾನದ ಕೊನೆಯ ಕ್ಷಣಗಳ ಮಾಹಿತಿ ಲಭ್ಯವಾಗಲಿವೆ. ಇದರಿಂದ ತನಿಖೆಗೆ ಹೆಚ್ಚು ಉಪಯುಕ್ತವಾಗಲಿದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಹಾಗೂ ವಿಮಾನ ಡೇಟಾ ರೆಕಾರ್ಡರ್‌ನಿಂದ ಈ ದುರಂತಕ್ಕೆ ಕಾರಣ ಹುಡುಕಲಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಎಂದರೇನು? ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದೂ ಕರೆಯಲಾಗುತ್ತದೆ. ಇದರಲ್ಲಿ ವಿಮಾನದ ಕಾರ್ಯಾಚರಣೆ ಮಾಹಿತಿ, ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲು ಆಗಿರುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ – ವಿದೇಶಿ ಮಹಿಳೆ ಅರೆಸ್ಟ್!
