ಮಂಗಳೂರು : ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು SSLC ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಡೆದಿದೆ. ಹಿಬಾ ಐಮನ್ (15) ಮೃತ ದುರ್ದೈವಿ.
ಕುತ್ತಾರಿನಲ್ಲಿರುವ 18 ಮಹಡಿಯ ಸಿಲಿಕೋನಿಯಾ ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಹಿಬಾ ಐಮನ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಮಹಡಿಯಲ್ಲಿ ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಹಿಬಾ ಐಮನ್‌ಳ ತಂದೆ, ತಾಯಿ ಇಬ್ಬರೂ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಹೆತ್ತವರು ಕರ್ತವ್ಯಕ್ಕೆ ತೆರಳಿದ್ದಾಗ ಅಪಾರ್ಟ್ಮೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನವರಸನ್ ನೇತೃತ್ವದ “ಉತ್ಸವ್ ಕೆಫೆ” ಆರಂಭ – ಜಿ.ಟಿ ಮಾಲ್ನಲ್ಲೊಂದು ಶುದ್ಧ ಸಸ್ಯಾಹಾರಿ ಹೋಟೆಲ್!
Author: Btv Kannada
Post Views: 320







