ಏರ್ ಇಂಡಿಯಾ ವಿಮಾನ ದುರಂತ – ‘ಕಣ್ಣಪ್ಪ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮುಂದೂಡಿದ ಚಿತ್ರತಂಡ!

ಅಹಮದಾಬಾದ್‌ನಲ್ಲಿ ಇಂದು ಮಧ್ಯಾಹ್ನ ನಡೆದ ಏರ್ ಇಂಡಿಯಾ ವಿಮಾನ ದುರಂತವು ಇಡೀ ದೇಶವನ್ನೇ ಆಘಾತಕ್ಕೆ ದೂಡಿದೆ. ಈ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರ ಗೌರವಾರ್ಥವಾಗಿ ನಾಳೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಬೇಕಿದ್ದ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲು ಚಿತ್ರತಂಡ ತೀರ್ಮಾನಿಸಿದೆ.

ಚಿತ್ರತಂಡ ‘ಕಣ್ಣಪ್ಪ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿ, ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಿಲ್ಲುವುದರ ಜೊತೆಗೆ ಸಂತಾಪ ಸೂಚಿಸಿದೆ. 

ಬೃಹತ್ ಬಜೆಟ್‌ನ ಈ ಚಿತ್ರ ಜೂನ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಹಿಂದಿಯ ‘ಮಹಾಭಾರತ’ ಧಾರಾವಾಹಿಯ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್, ಖ್ಯಾತ ನಟ ಮೋಹನ್ ಲಾಲ್, ಬಾಲಿವುಡ್​ನ ಅಕ್ಷಯ್ ಕುಮಾರ್ ಮತ್ತು ಕಾಜಲ್ ಅಗರ್ವಾಲ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಮಹಿಳಾ ಕಾನ್‌ಸ್ಟೇಬಲ್ ಮೇಲೆ ಹಲ್ಲೆ – ಹೆಡ್ ಕಾನ್‌ಸ್ಟೇಬಲ್ ಗೋವಿಂದರಾಜು ವಿರುದ್ಧ ಕ್ರಮಕ್ಕೆ ನಾಗಲಕ್ಷ್ಮಿ ಚೌಧರಿ ಆದೇಶ!

Btv Kannada
Author: Btv Kannada

Read More