ಬೆಂಗಳೂರು : ಉಪ್ಪಾರಪೇಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಿ.ಜಿ. ಗೋವಿಂದರಾಜು, ಮಹಿಳಾ ಕಾನ್ಸ್ಟೇಬಲ್ಗೆ ಬೂಟಿನಿಂದ ಒದ್ದಿದ್ದರು. ಮಹಿಳಾ ಕಾನ್‌ಸ್ಟೇಬಲ್ ರೇಣುಕಾ ಅವರು ನೀಡಿದ ದೂರಿನ ಮೇರೆಗೆ ಹೆಡ್ ಕಾನ್‌ಸ್ಟೇಬಲ್ ಬಿ.ಜಿ. ಗೋವಿಂದರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಗೋವಿಂದರಾಜು ಮೇಲೆ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆದೇಶ ಹೊರಡಿಸಿದ್ದಾರೆ.
ಈ ಘಟನೆ ಸಂಬಂಧ ವರದಿ ಪ್ರಕಟವಾಗುತ್ತಿದ್ದಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸ್ವಯಂ ಪ್ರೇರಿತರಾಗಿ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಪತ್ರದಲ್ಲಿ ಏನಿದೆ? ಉಪ್ಪಾರಪೇಟೆ ಹೆಡ್ ಕಾನ್ಸ್ ಸ್ಟೇಬಲ್ ಗೋವಿಂದರಾಜು ಅವರು ಮಹಿಳಾ ಕಾನ್‌ಸ್ಟೇಬಲ್ ಮೇಲೆ ಬೂಟಿನಿಂದ ಒದ್ದಿರುವ ವರದಿಯು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಿಂದರಾಜು ಅವರ ಮೇಲೆ ತಕ್ಷಣವೇ ಪೊಲೀಸ್ ಇಲಾಖೆಯ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸಿ. ಕೈಗೊಂಡ ಕ್ರಮದ ವರದಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಕೋರಲು ಮಾನ್ಯ ಅಧ್ಯಕ್ಷರಿಂದ ನಿರ್ದೇಶಿತನಾಗಿದ್ದೇನೆ.
ಇದನ್ನೂ ಓದಿ : ಡಾರ್ಲಿಂಗ್ ಕೃಷ್ಣ ಬರ್ತ್ಡೇಗೆ “ಬ್ರ್ಯಾಟ್” ಟೀಸರ್ ರಿಲೀಸ್ ಮಾಡಿ ಶುಭಾಶಯ ಹೇಳಿದ ಚಿತ್ರತಂಡ!
